ಮೈಸೂರು : ತೀವ್ರ ಅಚ್ಚರಿ ಮೂಡಿಸಿದ ಬಿಜೆಪಿಯ ಮಾಜಿ ಎಂಎಲ್ಸಿ ಸಿಪಿ ಯೋಗೇಶ್ವರ್ ಅವರು ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಒಂದು ವಿಚಾರವಾಗಿ ಪರಿಷತ್ ಬಿಜೆಪಿ ಸದಸ್ಯ ಎಚ್ ವಿಶ್ವನಾಥ್ ಅವರು ಸಿಪಿ ಯೋಗೇಶ್ವರ್ ಸೈನಿಕ ಕುಲಕ್ಕೆ ಅವಮಾನ ಅವನೊಬ್ಬ ಫ್ರಾಡ್ ಎಂದು ಆಕ್ರೋಶ ಹೊರಹಾಕಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಪಿ ಯೋಗೇಶ್ವರ್ ಸೈನಿಕ ಕುಲಕ್ಕೆ ಅವಮಾನ, ಅವನೊಬ್ಬ ಫ್ರಾಡ್ ಜೆಡಿಎಸ್ ಬಿಜೆಪಿ ಕಾಂಗ್ರೆಸ್ ಎಲ್ಲಾ ಪಕ್ಷದವರು ಕರೆಯುತ್ತಿದ್ದಾರೆ. ಅವನೊಬ್ಬ ದೊಡ್ಡ ಲೀಡರ್ ಅಂತ ಎಲ್ಲರೂ ಕರೆಯುತ್ತಿದ್ದೀರಾ? ಸಿಎಂ ಅವರೇ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ ಏಕೆ ಹಾಳು ಮಾಡುತ್ತಿದ್ದೀರಿ? ಸರ್ಕಾರ ಈಗಾಗಲೇ ಮುಡಾ, ವಾಲ್ಮೀಕಿ ನಿಗಮದ ಅಕ್ರಮದಲ್ಲಿ ಸಿಲುಕಿದೆ. ಇದರ ನಡುವೆ ಇನ್ನೊಬ್ಬ ಫ್ರಾಡ್ ಸೇರಿಸಿಕೊಂಡಿದ್ದೀರಿ.
ಕರ್ನಾಟಕ ರಾಜ್ಯ ಫ್ರಾಡ್ ಗಳ ಸಂತೆಯಾಗಿದೆ. ನಾನು ಹುಣಸೂರು ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೆ. ಸಿಎಂ ಆಗಿದ್ದ ಬಿಎಸ್ ಯಡಿಯೂರಪ್ಪ ಉಪಚುನಾವಣೆಗೆ ಬೇಕಾಗಿದ್ದನ್ನು ಕೊಟ್ಟು ಕಳುಹಿಸಿದ್ದರು. ಆಗ ಯೋಗೇಶ್ವರ್ ಹುಣಸೂರಿಗೆ ಬರಲಿಲ್ಲ. ದುಡ್ಡು ಕಾಸು ಎಲ್ಲವನ್ನು ಎತ್ತಿಕೊಂಡು ಯೋಗೇಶ್ವರ್ ಓಡಿ ಹೋದ ಎಂದು ಮೈಸೂರಿನಲ್ಲಿ ಪರಿಷತ್ನ ಬಿಜೆಪಿ ಸದಸ್ಯ ಎಚ್ ವಿಶ್ವನಾಥ್ ವಾಗ್ದಾಳಿ ನಡೆಸಿದರು.