ಬೆಂಗಳೂರು : ಬಿಜೆಪಿಯ ಮಾಜಿ MLC ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಬಹುತೇಕ ಖಚಿತವಾಗಿದೆ. ಚನ್ನಪಟ್ಟಣ ಉಪಚುನಾವಣೆ ಹಿನ್ನೆಲೆಯಲ್ಲಿ NDA ಟಿಕೆಟ್ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿದ್ದ ಸಿ.ಪಿ.ಯೋಗೇಶ್ವರ್ ಇದೀಗ ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಚರ್ಚಿಸಿದ್ದು, ಕಾಂಗ್ರೆಸ್ ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಚನ್ನಪಟ್ಟಣ ಕ್ಷೇತ್ರಕ್ಕೆ ಸಿಪಿ ಯೋಗೇಶ್ವರ್ ಅವರೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ಹೌದು ಈಗಾಗಲೇ ಸಂಡೂರು ಹಾಗೂ ಶಿಗ್ಗಾವಿ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಆದರೆ ಚನ್ನಪಟ್ಟಣ ಕ್ಷೇತ್ರ ಬಹಳ ಕುತೂಹಲ ಮೂಡಿಸಿತ್ತು. ಒಂದು ಕಡೆ ಕುಮಾರಸ್ವಾಮಿಯವರು ಸಿಪಿ ಯೋಗೇಶ್ವರ್ ಅವರಿಗೆ ತಮ್ಮ ಜೆಡಿಎಸ್ ಪಕ್ಷ ಚಿನ್ಹೆ ಬಳಸಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಸೂಚಿಸಿದ್ದರು.ಆದರೆ ಇದಕ್ಕೆ ಒಪ್ಪದ ಸಿಪಿ ಯೋಗೇಶ್ವರ್ ಬಿಜೆಪಿಯಿಂದಲೇ ಸ್ಪರ್ಧಿಸುತ್ತೇನೆ ಎಂದು ತಿಳಿಸಿದರು.
ಬಳಿಕ ಅವರು ಹುಬ್ಬಳ್ಳಿಗೆ ತೆರಳಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ತಮ್ಮ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಬಿಜೆಪಿ ನಾಯಕರ ಒಂದು ಸಂದೇಶಕ್ಕಾಗಿ ಕಾದು ಕುಳಿತಿದ್ದ ಸಿಪಿ ಯೋಗೇಶ್ವರ್ ನಿನ್ನೆ ರಾತ್ರಿಯವರೆಗೂ ಬಿಜೆಪಿ ನಾಯಕರ ಒಂದು ನಿರ್ಧಾರಕ್ಕೆ ಕಾದು ನೋಡುವ ತಂತ್ರ ಅನುಸರಿಸಿದರು.ಆದರೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗದ ಹಿನ್ನೆಲೆಯಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ಜೊತೆಗೆ ಸಿಪಿ ಯೋಗೇಶ್ವರ್ ಚರ್ಚಿಸಿದ್ದು ಬಹುತೇಕ ಅವರು ಇಂದೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ನಾಯಕರ ನಡೆಗೆ ಸಿಪಿ ಯೋಗೇಶ್ವರ್ ತೀವ್ರ ಅಸಮಾಧಾನ ಹೊರಹಾಕಿದ್ದು, ಬಿಜೆಪಿ ನಾಯಕರ ರೆಸ್ಪಾನ್ಸ್ ಗಾಗಿ ಸಿಪಿ ಯೋಗೇಶ್ವರ್ ಕಾದು ಕುಳಿತಿದ್ದರು. ಚನ್ನಪಟ್ಟಣದ ಕಾಸಿಗೆ ಹೋಟೆಲ್ ನಲ್ಲಿ ಸಿಪಿ ಯೋಗೇಶ್ವರ್ ತಂಗಿದ್ದರು ಸಂಜೆ 6:00 ಒಳಗೆ ನಿಮ್ಮ ತೀರ್ಮಾನ ತಿಳಿಸಿ ಎಂದು ಸಿಪಿ ಯೋಗೇಶ್ವರ್ ತಿಳಿಸಿದರು. ಸಂಸದ ಡಾ. ಸಿಎನ್ ಮಂಜುನಾಥ್ ಹಾಗೂ ಪ್ರಹ್ಲಾದ್ ಜೋಶಿಯವರಿಗೆ ಸಿಪಿ ಯೋಗೇಶ್ವರ್ ತಿಳಿಸಿದರು.ನಿನ್ನೆ ರಾತ್ರಿ ಬಿಜೆಪಿ ಅಭ್ಯರ್ಥಿ ಪಟ್ಟಿ ಬಿಡುಗಡೆ ಆಗದ ಹಿನ್ನೆಲೆಯಲ್ಲಿ ನೇರವಾಗಿ ಕಾಂಗ್ರೆಸ್ ಸೇರ್ಪಡೆಗೆ ಸಿಪಿ ಯೋಗೇಶ್ವರ್ ಸಜ್ಜಾಗಿದ್ದಾರೆ ಎನ್ನಲಾಗಿದೆ.