ಮಂಡ್ಯ : ಮಂಡ್ಯದ ಸಾಂಜೋ ಆಸ್ಪತ್ರೆ ಬಳಿಯ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 20ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಸ್ಥಿತಿ ಗಂಭೀರವಾಗಿದೆ. ಇದೀಗ ಬಸ್ ಅಪಘಾತದ ಕುರಿತು ಚಾಲಕ ಶಿವಕುಮಾರ್ ಅವರು ಮಾತನಾಡಿದ್ದಾರೆ.
ಮಂಡ್ಯ ಹೊರವಲಯದಲ್ಲಿ ಕೆಎಸ್ಆರ್ಟಿಸಿ ಬಸ್ ಅಪಘಾತದ ಕುರಿತಾಗಿ ಮಧ್ಯಮಗಳ ಜೊತೆಗೆ ಮಾತನಾಡಿದರು. ಸದ್ಯ ಮೀಮ್ಸ್ ಆಸ್ಪತ್ರೆಯಲ್ಲಿ ಚಾಲಕ ಶಿವಕುಮಾರ್ ಇದೀಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್ಸಿನ ಸ್ಟೇರಿಂಗ್ ಎಡಗಡೆ ಎಳೆದಾಗ ನಿಯಂತ್ರಣಕ್ಕೆ ಸಿಗಲಿಲ್ಲ. ತುಮಕೂರಿನಿಂದ ಮೈಸೂರಿಗೆ ತೆರಳುತ್ತಿದ್ದ ವೇಳೆ ಈ ಒಂದು ಅಪಘಾತವಾಗಿದೆ. ಬಸ್ ಈ ವೇಳೆ ೪೦ ಕಿಲೋಮೀಟರ ಸ್ಪೀಡ್ ನಲ್ಲಿ ಇತ್ತು ಲೈನರ್ ಜಾಮ್ ಆಗಿತ್ತು ಏನೋ ಗೊತ್ತಾಗಲಿಲ್ಲ.
ಎಕ್ಸ್ಪ್ರೆಸ್ ವೇನಿಂದ ಬಸ್ ಸರ್ವಿಸ್ ರಸ್ತೆಗೆ ಬಂದಾಗ ಅಪಘಾತವಾಗಿದೆ. ಸರ್ವಿಸ್ ರಸ್ತೆಯಲ್ಲಿ ಗುಂಡಿ ಇದ್ದದ್ದನ್ನು ನಾನು ಗಮನಿಸಿರಲಿಲ್ಲ. ಬಸ್ ಚಾಲನೆ ವೇಳೆ ನಾನು ಮೊಬೈಲ್ ಫೋನ್ ಬಳಸುತ್ತಿರಲಿಲ್ಲ ಎಂದು ಬಸ್ ಚಾಲಕ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.