Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಶ್ರೀಮಂತಿಕೆಯ ಸ್ಟೇಟಸ್ ಗಾಗಿ ಕಳ್ಳತನಕ್ಕಿಳಿದ ಪತಿರಾಯ : ಮಂಡ್ಯದಲ್ಲೋಬ್ಬ ಖತರ್ನಾಕ್ ಕಳ್ಳ ಅಂದರ್!

BIG NEWS : ಜಾಮೀನು ಮಂಜೂರಾತಿಗೆ ಮಹಿಳೆ ಎಂಬ ಕಾರಣ ಸಾಲದು : ಹೈಕೋರ್ಟ್ ಅಭಿಪ್ರಾಯ!

ಜೂ.1ರಿಂದ ಸರ್ಕಾರಿ ಶಾಲೆ ಪ್ರಾರಂಭ : ಶಾಲೆಗೆ ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಿ : ಸಚಿವ ಮಧು ಬಂಗಾರಪ್ಪ ಕರೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘IPS ಅಧಿಕಾರಿ ಎಂ.ಚಂದ್ರಶೇಖರ್’ ಅಕ್ರಮಗಳ ಸರಮಾಲೆಯನ್ನೇ ಬಿಚ್ಚಿಟ್ಟ ‘HDK’
KARNATAKA

‘IPS ಅಧಿಕಾರಿ ಎಂ.ಚಂದ್ರಶೇಖರ್’ ಅಕ್ರಮಗಳ ಸರಮಾಲೆಯನ್ನೇ ಬಿಚ್ಚಿಟ್ಟ ‘HDK’

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಐಪಿಎಸ್ ಅಧಿಕಾರಿ ಎಂ.ಚಂದ್ರಶೇಖರ್ ಅವರ ಅಕ್ರಮಗಳ ಸರಮಾಲೆಯನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಎಳೆಎಳೆಯಾಗಿ ಬಿಡಿಸಿಟ್ಟರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ದಾಖಲೆಗಳ ಸಮೇತ ಮಾತನಾಡಿದ ಅವರು; ಅಧಿಕಾರಿ ಚಂದ್ರಶೇಖರ್, ವಿಜಯ್ ತಾತಾ ಕುಮ್ಮಕ್ಕಾಗಿ ಮಾಡಿರುವ ಅಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಈ ಚಂದ್ರಶೇಖರ ಸಾಧನೆ ಏನು? ಪೊಲೀಸ್ ಇಲಾಖೆಯಲ್ಲಿ ದರೋಡೆಕೋರರು ಇದ್ದಾರೆ ಎಂದು ಹೇಳಿದ್ದೆ. ಅದಕ್ಕೆ ಒಂದು ಉದಾಹರಣೆ ಕೊಡುತ್ತೇನೆ ನೋಡಿ… ದೆಹಲಿಯಲ್ಲಿ PACL ಎಂಬ ಕಂಪನಿ ಇದೆ. ಭೂಮಿ ಖರೀದಿಸಿ ಲ್ಯಾಂಡ್ ಬ್ಯಾಂಕ್ ಮಾಡುವ ಕೆಲಸ ಇದು ಮಾಡುತ್ತದೆ. ಎರಡು ಲಕ್ಷ ಕೋಟಿ ಆಸ್ತಿಯನ್ನು ಕಂಪನಿ ಹೊಂದಿತ್ತು. ವಿಜಯ್ ತಾತಾ ಎಂಬವರು ಖಾಸಗಿ ವಾಹಿನಿ ನಡೆಸುತ್ತಿದ್ದರು. ಆ ವಾಹಿನಿ ಮುಚ್ಚಿ ಹೋಯಿತು, ಈಗ ಮತ್ತೊಂದು ಖಾಸಗಿ ಚಾನಲ್‌ ಇಟ್ಟಿಕೊಂಡು ಫೋರ್ಜರಿ ಮಾಡಲಾಗಿದೆ. ಆ ಇಡೀ ಹಗರಣಕ್ಕೆ ಈ ಚಂದ್ರಶೇಖರ ಗಾಡ್ ಫಾದರ್! 2023 ಫೆಬ್ರುವರಿಯಲ್ಲಿ ಅಂದಿನ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೆ ದೂರು ಕೊಡಲಾಗುತ್ತದೆ.

ಹಣ ವಾಪಸ್ ಪಡೆದುಕೊಳ್ಳಲು ಸಮಿತಿ ಮಾಡಲಾಗುತ್ತದೆ. ಎಲ್ಲಾ ಕಡೆ ಪೋರ್ಜರಿ ಮಾಡಿರುವ ವಿಜಯ್ ತಾತಾ ಮೇಲೆ ಎರಡೂವರೆ ಸಾವಿರ ಎಫ್ ಐಆರ್ ದಾಖಲಾಗಿವೆ. ಈವರೆಗೆ ಒಂದು ಎಫ್ ಐಆರ್ ಮೇಲೆಯೂ ಕ್ರಮ ಆಗಿಲ್ಲ. 2013 ಜೂನ್ 8ರಂದು PACL ಕಂಪನಿಯ ಮೇಲೆ ರಾಜಗೋಪಾಲ್ ನಗರ ಠಾಣೆಯಲ್ಲಿ ಶಿವಕುಮಾರ್ ಎಂಬುವವರು ದೂರು ನೀಡುತ್ತಾರೆ. ವಿಜಯ್ ತಾತಾನೇ ಈತನ ಕೈಯಿಂದ ದೂರು ಕೊಡಿಸುತ್ತಾನೆ. ₹50,000 ಹಣವನ್ನು PACL ಕಂಪನಿಗೆ‌ ಕಟ್ಟಿಸುತ್ತಾನೆ. ಮಾರನೇ ದಿನ ಆತನೇ ದೂರು ಕೊಡಿಸುತ್ತಾನೆ. ಆಗ ಸಿಸಿಬಿನಲ್ಲಿ ಈ ಚಂದ್ರಶೇಖರ್ ಇದ್ದರು. 8ನೇ ತಾರೀಖು ಸಂಜೆ 4 ಗಂಟೆಗೆ ದೂರು ದಾಖಲಾಗುತ್ತದೆ. ಸಂಜೆ‌ 8 ಗಂಟೆಗೆ ಇಲ್ಲಿಂದ ಪೊಲೀಸರನ್ನು ಕಳುಹಿಸರುತ್ತಾರೆ. ಆ ಕಂಪನಿಯವರ‌ ಮನೆ ಬಳಿ ಹೋಗಿ ಭಯಪಡಿಸುತ್ತಾರೆ, ಹೆದರಿಸುತ್ತಾರೆ. ಪೊಲೀಸರ ಬಳಿ ಹೋಗಿ ಮಾತಾಡಿಸುತ್ತೇನೆ, ₹100 ಕೋಟಿ ಕೊಡಿ ಎಂದು ವಿಜಯ್ ತಾತಾ ಹೇಳುತ್ತಾನೆ. ಅದರಲ್ಲಿ ₹80 ಕೋಟಿ ನಗದು, ₹21 ಕೋಟಿ‌ ಚೆಕ್ ಕೊಡುತ್ತಾರೆ ಎಂದು ಕುಮಾರಸ್ವಾಮಿ ಅವರು ದಾಖಲೆಗಳ ಸಮೇತ ಆರೋಪ ಮಾಡಿದರು.

ರೌಡಿ ದೂರಿನಿಂದ ಸಿಕ್ಕಿ ಹಾಕಿಕೊಂಡ ಚಂದ್ರಶೇಖರ್!

ಹಿಂದೆ ಶ್ರೀಧರ್ ಎಂಬ ರೌಡಿ ಇದ್ದ. ಅವನ ಆತನ ವಿಜಯ್ ತಾತಾ ಏನೇನು‌ ಆಟ ಆಡಿದ ಎನ್ನುವುದು ಅಧಿಕಾರಿ ಚಂದ್ರಶೇಖರ್ ಗೆ ಚೆನ್ನಾಗಿ ಗೊತ್ತಿದೆ. ಶ್ರೀಧರ್ ನ ಮತ್ತೆ ಜೈಲಿಗೆ ಕಳುಹಿಸಲು ಇವರು ಪ್ರಯತ್ನ ಮಾಡಿದರು. ಎಚ್ಚೆತ್ತ ಶ್ರೀಧರ್ ಇದೇ ವಿಜಯ್ ತಾತಾ ವಿರುದ್ಧ ದೂರು ದಾಖಲು ಮಾಡುತ್ತಾನೆ. ವಿಜಯ್ ತಾತಾ ಆರೋಪ ಪಟ್ಟಿಯಲ್ಲಿ ಮೊದಲ ಆರೋಪಿ ಆಗುತ್ತಾನೆ. ಆ ಸಂದರ್ಭದಲ್ಲಿ ಈ ಅಧಿಕಾರಿ ಚಂದ್ರಶೇಖರ್ ಮಾಡಿದ್ದೇನು? ಈತನಿಗೆ ಐಜಿ ಕೆಲಸ ಕೊಟ್ಟಿದ್ದು ಇಂಥ ನಟೋರಿಯಸ್ ಮಾಡೋಕಾ? ಕೇಸ್ ನಡೆಸಿ ಅಂದ್ರೆ ಸ್ಟೇ ತೆಗೆದುಕೊಂಡಿದ್ದಾರೆ. ಕಿಶೋರ್ ಎಂಬ ಇನ್ಸ್‌ಪೆಕ್ಟರ್ ಒಬ್ಬರನ್ನು ಸಹ ಇವರು ಬ್ಲಾಕ್ ಮೇಲ್ ಮಾಡುತ್ತಾರೆ. ಆಗ ₹20 ಕೋಟಿ ಹಣವನ್ನು ಚಂದ್ರಶೇಖರ್ ಡಿಮ್ಯಾಂಡ್ ಮಾಡುತ್ತಾರೆ. ಸಂಜೆಯೊಳಗೆ ₹2 ಕೋಟಿ‌ ಕೊಡಬೇಕು ಎಂದು ಧಮ್ಕಿ ಹಾಕುತ್ತಾರೆ ಈ ಅಧಿಕಾರಿ. ಇಂಥ ಅಧಿಕಾರಿ ರಾಜ್ಯಪಾಲರ ಸಿಬ್ಬಂದಿ ತನಿಖೆಗೆ ಅನುಮತಿ ಕೇಳುತ್ತಾರೆ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ಆರ್.ಟಿ.ನಗರ ಆಕ್ಸಿಸ್ ಬ್ಯಾಂಕ್ ಶಾಖೆಗೆ ₹21 ಕೋಟಿ ವರ್ಗಾವಣೆ

ವಸೂಲಿ ಮಾಡಿದ ಹಣದಲ್ಲಿ ಆರ್.ಟಿ.ನಗರ ಆಕ್ಸಿಸ್ ಬ್ಯಾಂಕ್ ಶಾಖೆಗೆ ₹21 ಕೋಟಿ ವರ್ಗಾವಣೆ ಆಗುತ್ತದೆ. ₹50 ಕೋಟಿಯನ್ನು ಚೆಕ್ ಗಳನ್ನು ಬೇರೆ ಬೇರೆಯವರ ಹೆಸರಿನಲ್ಲಿ ಬರೆಸಿಕೊಂಡು ಚಂದ್ರಶೇಖರ್ ಬ್ಯಾಂಕ್ ಖಾತೆಗೆ ಹಾಕಿಸುತ್ತಾರೆ. ಇಲ್ಲಿ ವಿಜಯ್ ತಾತಾ ತನ್ನ ಜತೆ ಕೆಲಸ ಮಾಡುತ್ತಿದ್ದ ಮಂಜುನಾಥ್ ಎಂಬುವರನ್ನು ಬಳಕೆ ಮಾಡಿಕೊಳ್ಳುತ್ತಾರೆ. ಹಾಗೆಯೇ PACL ಕಂಪನಿಗೆ ಹೆದರಿಸಿ ಸತೀಶ್ ಎಂಬರನ್ನು ಕಳುಹಿಸಿ ₹10 ಕೋಟಿಯನ್ನು ಮತ್ತೆ ವಸೂಲಿ ಮಾಡುತ್ತಾರೆ. ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿದಾಗ ಮಂಜುನಾಥ್ ಎಲ್ಲವನ್ನೂ ಬಾಯಿ ಬಿಡುತ್ತಾರೆ. ಆಮೇಲೆ ಚಂದ್ರಶೇಖರ್, ತಾತಾ ಅಕ್ರಮ ಎಲ್ಲಾ ಬಯಲಿಗೆ ಬರುತ್ತದೆ ಎಂದು ಕೇಂದ್ರ ಸಚಿವರು ದಾಖಲೆಗಳ ಸಮೇತ ಹೇಳಿದರು.

ಇವರ ಅಕ್ರಮಗಳು ಇಲ್ಲಿಗೇ ನಿಲ್ಲುವುದಿಲ್ಲ. ಆಂಬಿಡೆಂಟ್ ಎಂಬ ಕಂಪನಿಯಿಂದ ₹30 ಕೋಟಿ ವಸೂಲಿ ಮಾಡುತ್ತಾರೆ. ಇನ್ನೂ ಹಲವಾರು ಕಂಪನಿಗಳಿಗೆ ಇವರು ಹೆದರಿಸಿ ಬ್ಲಾಕ್ ಮೇಲ್ ಮಾಡಿದ್ದಾರೆ. ಈ ಎಲ್ಲಾ ದಂಧೆಯಲ್ಲಿ ಚಂದ್ರಶೇಖರ್ ಪಾಲು ಹೊಂದಿದ್ದಾರೆ ಎಂದು ಅವರು ದೂರಿದರು.

BIG NEWS: ಬೆಂಗಳೂರಲ್ಲಿ ಪ್ರಿಯಕರನನ್ನೇ ರಾಬರಿ ಮಾಡಿಸಿದ ಕಿಲಾಡಿ ಪ್ರಿಯತಮೆ: ಪ್ರೇಯಸಿ ಸೇರಿ ನಾಲ್ವರು ಅರೆಸ್ಟ್

BREAKING : ಮುಸ್ಲಿಂರು ‘ಹಮ್ ಪಾಂಚ್ ಹಮಾರಾ ಪಂಚಿಸ್’ ಅಂತಾರೆ : ಶಾಸಕ ಯತ್ನಾಳ್ ವಿವಾದಾತ್ಮಕ ಹೇಳಿಕೆ

Share. Facebook Twitter LinkedIn WhatsApp Email

Related Posts

ಶ್ರೀಮಂತಿಕೆಯ ಸ್ಟೇಟಸ್ ಗಾಗಿ ಕಳ್ಳತನಕ್ಕಿಳಿದ ಪತಿರಾಯ : ಮಂಡ್ಯದಲ್ಲೋಬ್ಬ ಖತರ್ನಾಕ್ ಕಳ್ಳ ಅಂದರ್!

1 Min Read

BIG NEWS : ಜಾಮೀನು ಮಂಜೂರಾತಿಗೆ ಮಹಿಳೆ ಎಂಬ ಕಾರಣ ಸಾಲದು : ಹೈಕೋರ್ಟ್ ಅಭಿಪ್ರಾಯ!

1 Min Read

ಜೂ.1ರಿಂದ ಸರ್ಕಾರಿ ಶಾಲೆ ಪ್ರಾರಂಭ : ಶಾಲೆಗೆ ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಿ : ಸಚಿವ ಮಧು ಬಂಗಾರಪ್ಪ ಕರೆ

1 Min Read
Recent News

ಶ್ರೀಮಂತಿಕೆಯ ಸ್ಟೇಟಸ್ ಗಾಗಿ ಕಳ್ಳತನಕ್ಕಿಳಿದ ಪತಿರಾಯ : ಮಂಡ್ಯದಲ್ಲೋಬ್ಬ ಖತರ್ನಾಕ್ ಕಳ್ಳ ಅಂದರ್!

BIG NEWS : ಜಾಮೀನು ಮಂಜೂರಾತಿಗೆ ಮಹಿಳೆ ಎಂಬ ಕಾರಣ ಸಾಲದು : ಹೈಕೋರ್ಟ್ ಅಭಿಪ್ರಾಯ!

ಜೂ.1ರಿಂದ ಸರ್ಕಾರಿ ಶಾಲೆ ಪ್ರಾರಂಭ : ಶಾಲೆಗೆ ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಿ : ಸಚಿವ ಮಧು ಬಂಗಾರಪ್ಪ ಕರೆ

ಆನೆಧಾಮಕ್ಕೆ ಶೀಘ್ರವೇ ಟೆಂಡರ್, ಹೊಸ ಮೃಗಾಲಯ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ಸಚಿವ ಈಶ್ವರ ಖಂಡ್ರೆ

State News
KARNATAKA

ಶ್ರೀಮಂತಿಕೆಯ ಸ್ಟೇಟಸ್ ಗಾಗಿ ಕಳ್ಳತನಕ್ಕಿಳಿದ ಪತಿರಾಯ : ಮಂಡ್ಯದಲ್ಲೋಬ್ಬ ಖತರ್ನಾಕ್ ಕಳ್ಳ ಅಂದರ್!

By ಸುರೇಶ್‌ KARNATAKA 1 Min Read

ಮಂಡ್ಯ : ಹೆಂಡತಿಯ ಮುಂದೆ ಸ್ಟೇಟಸ್ ತೋರಿಸಲು ಹೋಗಿ ಪೊಲೀಸರ ಕೈಗೆ ತಗಲಾಕ್ಕೊಂಡ ಐನಾತಿ ಪತಿಯೊಬ್ಬ ಇದೀಗ ಪೋಲೀಸರ ಅಥಿತಿಯಾಗಿದ್ದಾನೆ.…

BIG NEWS : ಜಾಮೀನು ಮಂಜೂರಾತಿಗೆ ಮಹಿಳೆ ಎಂಬ ಕಾರಣ ಸಾಲದು : ಹೈಕೋರ್ಟ್ ಅಭಿಪ್ರಾಯ!

ಜೂ.1ರಿಂದ ಸರ್ಕಾರಿ ಶಾಲೆ ಪ್ರಾರಂಭ : ಶಾಲೆಗೆ ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಿ : ಸಚಿವ ಮಧು ಬಂಗಾರಪ್ಪ ಕರೆ

ಆನೆಧಾಮಕ್ಕೆ ಶೀಘ್ರವೇ ಟೆಂಡರ್, ಹೊಸ ಮೃಗಾಲಯ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ಸಚಿವ ಈಶ್ವರ ಖಂಡ್ರೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.