ಬೆಂಗಳೂರು ; ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೊಬ್ಬ ವಿಚಿತ್ರ ಕಳ್ಳನ ಪ್ರಕರಣ ಬೆಳಕಿಗೆ ಬಂದಿದ್ದು, ಬಟ್ಟೆ ಅಂಗಡಿ ಮುಂದೆ ಇರುವ ಗೊಂಬೆಯ ಪ್ಯಾಂಟ್ ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಬೆಂಗಳೂರಿನ ಯಲಹಂಕ ಬಳಿಯ ತಿರುಮೇನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ವಿಚಿತ್ರ ಕಳ್ಳನೊಬ್ಬ ಬಟ್ಟೆ ಅಂಗಡಿ ಮುಂದೆ ಇಟ್ಟಿರುವ ಗೊಂಬೆಯ ಪ್ಯಾಂಟ್ ಕದ್ದು ಪರಾರಿಯಾಗಿದ್ದಾನೆ. ಬಟ್ಟೆ ಅಂಗಡಿಯ ಸಿಸಿಟಿಯಲ್ಲಿ ಕಳ್ಳನ ಕೃತ್ಯ ಸೆರೆಯಾಗಿದ್ದು, ಅಂಗಡಿ ಮಾಲೀಕರು ಪೊಲೀಸರಿಗೆ ಟ್ಯಾಗ್ ಟ್ವೀಟ್ ಮಾಡಿದ್ದಾರೆ.
ಹಾಡಹಗಲೇ ಕಳ್ಳನೊಬ್ಬ ಬಟ್ಟೆ ಅಂಗಡಿಗೆ ಬಂದು ಹೊರಗಡೆ ಇಟ್ಟಿದ್ದ ಗೊಂಬೆಯ ಮೇಲಿನ ಪ್ಯಾಂಟ್ ಮಾತ್ರ ಕದ್ದು ಪರಾರಿಯಾಗಿದ್ದಾನೆ. ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.