ಧಾರವಾಡ : ನಾಗಮಂಗಲದಲ್ಲಿ ಗಣೇಶ ವಿಸರ್ಜನೆಯ ವೇಳೆ ಗಲಭೆ ನಡೆದಂತಹ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಪ್ರತಿಕ್ರಿಯೆ ನೀಡಿದ್ದು, ರಾಜ್ಯದಲ್ಲಿ ಉತ್ತರ ಪ್ರದೇಶದ ಮಾದರಿಯಲ್ಲಿ ಗಲಭೆ, ಗಲಾಟೆ ನಡೆಯದಂತೆ ಸೂಕ್ತವಾದಂತ ಬಂದೋಬಸ್ತ್ ಮಾಡಿ ಎಂದು ತಿಳಿಸಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈದ್ಗ ಮೈದಾನದಲ್ಲಿ ಗಣಪತಿ ಇಡಲು ಅವಕಾಶ ಕೊಟ್ಟರು.ಅದಕ್ಕೆ ಅವರಿಗೆ ಎಷ್ಟು ಗೌರವ ಸಿಕ್ಕಿತ್ತು ನೋಡಿ. ಸಮಾಜದಲ್ಲಿ ಕೆಲವರು ಬೆಂಕಿ ಹಚ್ಚುವವರು ಇರುತ್ತಾರೆ. ಗಲಾಟೆ ಮಾಡುವ ಉದ್ದೇಶವನ್ನೇ ಇಟ್ಟುಕೊಂಡಿದ್ದಾರೆ ಎಲ್ಲರೂ ಹೊಂದಿಕೊಂಡು ಹೋಗುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಆದ್ದರಿಂದ ಉತ್ತರ ಪ್ರದೇಶದಂತೆ ಬಂದೋಬಸ್ತ್ ಮಾಡಿ.ಗಲಾಟೆ ಮಾಡಿದವರಿಗೆ ಶಿಕ್ಷೆ ಆಗುತ್ತದೆ ಎಂಬ ಗ್ಯಾರಂಟಿಯೇ ಇಲ್ಲ. 4-5 ದಿನ ಜೈಲಿನಲ್ಲಿದ್ದು ಹೊರ ಬರುತ್ತಾರೆ. ಇದು ತಪ್ಪಬೇಕು ಈ ಸಂಬಂಧ ನಾನು ಮುಖ್ಯಮಂತ್ರಿ ಅವರಿಗೆ ಪತ್ರ ಬರೆಯುತ್ತೇನೆ ಎಂದು ಧಾರವಾಡದಲ್ಲಿ ಸಭಾಪತಿ ಬಸವರಾಜ್ ಹೊರಟಿ ಹೇಳಿಕೆ ನೀಡಿದರು.