ಬೆಂಗಳೂರು : ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಲ್ಲಿ ಮತ್ತೊಂದು ಸ್ಫೋಟಕ ವಾದಂತಹ ಮಾಹಿತಿ ಬಹಿರಂಗವಾಗಿದ್ದು, ಕರ್ನಾಟಕ ಬಿಜೆಪಿ ಕಚೇರಿಯನ್ನು ಉಗ್ರರು ಸ್ಪೋಟಿಸುವ ಪ್ಲಾನ್ ಮಾಡಿಕೊಂಡಿದ್ದರು ಎಂಬ ಆಘಾತಕಾರಿ ವಿಷಯ ಉಲ್ಲೇಖವಾಗಿದೆ.
ಹೌದು ಬಿಜೆಪಿ ಕಚೇರಿ ಸ್ಪೋಟಗೊಳಿಸುವ ಪ್ಲಾನ್ ವಿಫಲವಾದ ಹಿನ್ನೆಲೆಯಲ್ಲಿ ಕರ್ನಾಟಕ ಬಿಜೆಪಿ ಕಚೇರಿ ಸ್ಫೋಟೋಗೊಳಿಸಲು ಪ್ಲಾನ್ ಮಾಡಲಾಗಿತ್ತು. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಮಾಡೋಕು ಮುಂಚೆ ಅದೇ ದಿನ ಬಿಜೆಪಿ ಕಚೇರಿ ಸ್ಪೋಟಗೋಳಿಸಲು ಪ್ಲಾನ್ ಮಾಡಲಾಗಿದೆ ಎಂಬ ಅಂಶ ಎನ್ಐಎ ಸಲ್ಲಿಸಿದ್ದ ನಾಲ್ವರು ಆರೋಪಿಗಳ ವಿರುದ್ಧ ಜಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.