ಬೆಂಗಳೂರು : ರಾಜ್ಯ ಸರ್ಕಾರವು ಕನ್ನಡಿಗರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, 2029 ರ ವೇಳೆ ಬಿಟಿ ಕ್ಷೇತ್ರದಲ್ಲಿ 30 ಸಾವಿರ ಉದ್ಯೋಗ ಸೃಷ್ಟಿ ಹಾಗೂ 20 ಸಾವಿರ ಜನರಿಗೆ ವಿಶೇಷ ಕೌಶಲ್ಯ ತರಬೇತಿ ನೀಡುವ ಗುರಿಯೊಂದಿಗೆ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆ 2024-29 ನೇ ಸಾಲಿನ ಜೈವಿಕ ತಂತ್ರಜ್ಞಾನ ನೀತಿಯನ್ನು ಪ್ರಕಟಿಸಿದೆ.
ರಾಜ್ಯ ಸರ್ಕಾರವು ಕರ್ನಾಟಕ ಬಿಟಿ ಕ್ಷೇತ್ರಕ್ಕೆ ಹೊಸ ನವೋದ್ಯಮ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪ್ರವೇಶಕ್ಕೆ ಉತ್ತೇಜನ ನೀಡುವುದು ಸೇರಿದಂತೆ ಹಲವು ಅಂಶಗಳನ್ನೊಳಗೊಂಡ ಬಿಟಿ ನೀತಿ 2024-29 ಅನ್ನು ಸಿದ್ದಪಡಿಸಿಸಿದ್ದು, ಬಿಟಿ ಚಟುವಟಿಕೆಗಳಿಗೆ ಬೆಂಬಲ ಹಾಗೂ ಬಿಟಿ ಉದ್ಯಮದಲ್ಲಿ ಕೆಲಸ ಮಾಡುವವರಿಗೆ ಹಣಕಾಸಿನ ಪ್ರೋತ್ಸಾಹ ಹಾಗೂ ವಿವಿಧ ರಿಯಾಯಿತಿಗಳನ್ನು ನೀಡುವ ಅಂಶಗಳಿವೆ.
ಹೊಸ ಬಿಟಿ ನೀತಿಯಲ್ಲಿ 2029 ರ ವೇಳೆಗೆ 50 ಹೊಸ ಸಂಸ್ಥೆಗಳು ಸೇರಿದಂತೆ 300 ಜೈವಿಕ ತಂತ್ರಜ್ಞಾನ ಕಂಪನಿಗಳ ರಚನೆ, 30 ಸಾವಿರ ಉದ್ಯೋಗ ಸೃಷ್ಟಿ, 20 ಸಾವಿರ ಜನರಿಗೆ ಕೌಶಲ್ಯ ತರಬೇತಿ ನೀಡಲು 200 ಕ್ಕೂ ಹೆಚ್ಚು ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದುವ ಗುರಿಯನ್ನು ಹೊಂದಿದೆ.