ಮೈಸೂರು : ಆಕೆ 8 ತಿಂಗಳ ತುಂಬು ಗರ್ಭಿಣಿ ಇದನ್ನು ಲೆಕ್ಕಿಸದೆ ಪತಿಯಾದವನು ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿದ್ದರಿಂದ ಮನನೊಂದು 8 ತಿಂಗಳ ಗರ್ಭಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಕನಕಗಿರಿಯಲ್ಲಿ ನಡೆದಿದೆ.
ಹೌದು ಮೈಸೂರಿನ ಕನಕಗಿರಿಯಲ್ಲಿ ಚೈತ್ರ @ ಚಿಕ್ಕದೇವಿ (23) ಆತ್ಮಹತ್ಯೆ ಮಾಡಿಕೊಂಡ ಗರ್ಭಿಣಿ ಎಂದು ತಿಳಿದುಬಂದಿದೆ. ಎರಡು ವರ್ಷಗಳ ಹಿಂದೆ ಕನಕಗಿರಿಯ ಶರತರಾಜು ಜೊತೆ ಚೈತ್ರ ಮದುವೆಯಾಗಿದ್ದಳು.
ಇನ್ನೂ ಚೈತ್ರಾ ಪತಿ ಶರತ್ ರಾಜ್ ನನ್ನು ವಿದ್ಯಾರಣ್ಯಪುರಂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಿರುಕುಳ ತಾಳಲಾರದೆ ಚೈತ್ರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪ ಹೇಳಿ ಬಂದಿದ್ದು ಪತಿಯ ಮನೆಯ ವಿರುದ್ಧ ವಿರುದ್ಧ ಚೈತ್ರ ಪೋಷಕರು ದೂರು ಸಲ್ಲಿಸಿದ್ದು, ಘಟನೆ ಕುರಿತಂತೆ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.