ಪ್ಯಾರಿಸ್ : ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಮಂಗಳವಾರ ನಡೆದ ಪುರುಷರ ಹೈ ಜಂಪ್ ಟಿ 63 ಫೈನಲ್ನಲ್ಲಿ ಭಾರತದ ಶರದ್ ಕುಮಾರ್ ಮತ್ತು ಮರಿಯಪ್ಪನ್ ತಂಗವೇಲು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿದ್ದಾರೆ. ಟಿ 42 ವಿಭಾಗದಲ್ಲಿ ಶರದ್ 1.88 ಮೀಟರ್ ದೂರ ಜಿಗಿದು ಪ್ಯಾರಾಲಿಂಪಿಕ್ಸ್ ದಾಖಲೆ ನಿರ್ಮಿಸಿದರೆ, ಮರಿಯಪ್ಪನ್ 1.85 ಮೀಟರ್ ದೂರ ಜಿಗಿದಿದ್ದಾರೆ.
ಅಮೆರಿಕದ ಎಜ್ರಾ ಫ್ರೆಚ್ 1.94 ಮೀಟರ್ ಜಿಗಿದು ಚಿನ್ನ ಗೆದ್ದರು, ಇದು ಟಿ 63 ವಿಭಾಗದಲ್ಲಿ ಹೊಸ ಪ್ಯಾರಾಲಿಂಪಿಕ್ಸ್ ದಾಖಲೆಯಾಗಿದೆ. ಈ ಸ್ಪರ್ಧೆಯಲ್ಲಿ ಮೂರನೇ ಭಾರತೀಯ ಶೈಲೇಶ್ ಕುಮಾರ್ 1.85 ಸೆಕೆಂಡುಗಳಲ್ಲಿ ಗುರಿ ತಲುಪಿ ನಾಲ್ಕನೇ ಸ್ಥಾನ ಪಡೆದರು. ಶೈಲೇಶ್ ಈ ಸಾಧನೆಯೊಂದಿಗೆ ತಮ್ಮ ವೈಯಕ್ತಿಕ ಶ್ರೇಷ್ಠತೆಯನ್ನು ಸರಿಗಟ್ಟಿದರು.
#ParaAthletics: Men's High Jump T63 Final
Sharad Kumar clinches #Silver with a #Paralympic record (T42 category) with a leap of 1.88m.
Let’s hear it for our champions, let's #Cheer4Bharat🇮🇳
Tune in to DD Sports and Jio Cinema to keep streaming the #Paralympics2024 on Jio… pic.twitter.com/GG1T3mwWgJ
— SAI Media (@Media_SAI) September 3, 2024
ಟೋಕಿಯೊದಲ್ಲಿ 1.83 ಮೀಟರ್ ಜಿಗಿದು ಕಂಚಿನ ಪದಕ ಗೆದ್ದ ನಂತರ ಶರದ್ ಮಂಗಳವಾರ ಬೆಳ್ಳಿ ಪದಕ ಗೆದ್ದಿದ್ದಾರೆ. ಮರಿಯಪ್ಪನ್ ತಂಗವೇಲು ಕಂಚಿನ ಪದಕದೊಂದಿಗೆ ಸತತ ಮೂರು ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2016ರ ರಿಯೋ ಒಲಿಂಪಿಕ್ಸ್ನಲ್ಲಿ ಚಿನ್ನ ಹಾಗೂ 2021ರಲ್ಲಿ ಟೋಕಿಯೋದಲ್ಲಿ ಬೆಳ್ಳಿ ಜಯಿಸಿದ್ದರು.
#ParaAthletics: Men's High Jump T63 Final
2-time Paralympic medallist Mariyappan Thangavelu bags a #Bronze with a leap of 1.85m (T42 category)
Let’s hear it for our champions, let's #Cheer4Bharat🇮🇳
Tune in to DD Sports and Jio Cinema to keep streaming the #Paralympics2024 on… pic.twitter.com/BhU0F7wV4x
— SAI Media (@Media_SAI) September 3, 2024