Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಶಿವಮೊಗ್ಗದಲ್ಲಿ ಘೋರ ದುರಂತ : ಮನೆ ಮುಂದೆ ಆಟವಾಡುತ್ತಿದ್ದ ಮಗುವಿಗೆ ಹಾವು ಕಚ್ಚಿ ಸಾವು!

16/04/2026 11:42 AM

ಶಾಸಕ ವಿನಯ್ ಕುಲಕರ್ಣಿಗೆ ಶಿಕ್ಷೆ ಪ್ರಮಾಣ ಪ್ರಕಟದ ತೀರ್ಪನ್ನು ಕೆಲಕಾಲ ಮುಂದೂಡಿದ ಕೋರ್ಟ್

16/04/2026 11:37 AM

SHOCKING : ‘ಮಗು ಬೇಕಿದ್ದರೆ ನಿನ್ನ ಹೆಂಡತಿಯನ್ನು ನನ್ನ ಬಳಿ ಕಳುಹಿಸು’: ನಾಸಿಕ್ ‘TCS’ ಉದ್ಯೋಗಿಗೆ ಅವಮಾನಿಸಿದ ಟೀಮ್ ಲೀಡರ್!

16/04/2026 11:36 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಶಾಸಕ’ರ ಮಾತಿಗೂ ಡೋಂಟ್ ಕೇರ್: ‘ಅಕ್ರಮ ಕಲ್ಲುಕ್ವಾರಿ’ ನಡೆಸಿದರೂ ಕಣ್ಮುಚ್ಚಿ ಕುಳಿತ ‘ಸಾಗರ ತಾಲೂಕು’ ಆಡಳಿತ
KARNATAKA

‘ಶಾಸಕ’ರ ಮಾತಿಗೂ ಡೋಂಟ್ ಕೇರ್: ‘ಅಕ್ರಮ ಕಲ್ಲುಕ್ವಾರಿ’ ನಡೆಸಿದರೂ ಕಣ್ಮುಚ್ಚಿ ಕುಳಿತ ‘ಸಾಗರ ತಾಲೂಕು’ ಆಡಳಿತ

By kannadanewsnow0925/06/2024 8:27 PM

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಸಮೀಪದಲ್ಲೇ ಕಲ್ಲುಕ್ವಾರೆ ನಡೆಯುತ್ತಿದೆ. ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕಲ್ಲುಕ್ವಾರಿ ನಡೆಸುತ್ತಿದ್ದಾರೆ. ಅದನ್ನು ತಕ್ಷಣದಿಂದ ನಿಲ್ಲಿಸಿ, ಆ ಸರ್ಕಾರಿ ಭೂಮಿಯನ್ನು ಗೋಶಾಲೆಗಾಗಿ ಮೀಸಲಿಡಿ ಅಂತ ಶಾಸಕ ಬೇಳೂರು ಗೋಪಾಲಕೃಷ್ಣ ಕೆಡಿಪಿ ಸಭೆಯಲ್ಲೇ ಖಡಕ್ ಆದೇಶ ಮಾಡಿದ್ರು. ಆದ್ರೇ ಸಾಗರ ತಾಲೂಕು ಆಡಳಿತ ಮಾತ್ರ, ಅದರ ಗೋಜಿಗೇ ಹೋಗಿಲ್ಲ. ಕಲ್ಲುಕ್ವಾರಿ ಬಂದ್ ಮಾಡಿಸಿ, ಸರ್ಕಾರಿ ಭೂಮಿ ಒತ್ತುವರಿ ತೆರವು ಮಾಡಿಸೋ ಕೆಲಸ ಮಾತ್ರ ಈವರೆಗೆ ಆಗಿಲ್ಲ. 

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತ್ಯಾಗರ್ತಿ ಬಳಿಯ ನಾಡಕಲಸಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರೋಬ್ಬರಿ 48 ಎಕರೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಲಾಗಿದೆ. ಈ ಬಗ್ಗೆ ಕೆಲ ದಿನಗಳ ಹಿಂದೆ ನಡೆದಿದ್ದಂತ ಸಾಗರ ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ತಹಶೀಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಸರ್ಕಾರಿ ಭೂಮಿ ಒತ್ತುವರಿಯನ್ನು ತೆರವುಗೊಳಿಸಬೇಕು. ಕೂಡಲೇ ಆ ಕೆಲಸ ಮಾಡಬೇಕು. ಆ ಭೂಮಿಯನ್ನು ಗೋಶಾಲೆಗೆ ಮೀಸಲಿಡಬೇಕು. ಒತ್ತುವರಿ ಮಾಡಿರೋರು ಯಾರೇ ಬಲಾಢ್ಯರಾಗಿದ್ದರೂ ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಂಡು, ತೆರವು ಮಾಡುವಂತೆ ಖಡಕ್ ಆದೇಶ ಮಾಡಿದ್ದರು. ಯಾರೋ ಒಂದಿಬ್ಬರು ಪ್ರತಿಭಟನೆ ಮಾಡುತ್ತಾರೆ ಅಂತ ಸರ್ಕಾರಿ ಜಮೀನು ಒತ್ತುವರಿ ತೆರವು ಮಾಡದೇ ಇರೋದಕ್ಕೆ ಆಗೋದಿಲ್ಲ. ಸಾರ್ವಜನಿಕರ ಉಪಯೋಗಕ್ಕಾಗಿ ಮೀಸಲಿಟ್ಟಂತ ಭೂಮಿ ಅದಾಗಿದೆ. ತಹಶೀಲ್ದಾರರು ಕೂಡಲೇ ಸ್ಥಳಕ್ಕೆ ತೆರಳಿ, ತೆರವು ಕಾರ್ಯ ಮಾಡುವಂತೆ ತಿಳಿಸಿದ್ದರು.

ಶಾಸಕ ಬೇಳೂರು ಗೋಪಾಲಕೃಷ್ಣ ಆದೇಶಿಸಿ 15 ದಿನಗಳೇ ಕಳೆದರೂ, ನಾಡಕಲಸಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವಂತ ಕಲ್ಲುಕ್ವಾರಿ, ಸರ್ಕಾರಿ ಭೂಮಿ ಒತ್ತುವರಿ ತೆರವು ಮಾಡಿಸೋ ಕೆಲಸ ಮಾಡಿಲ್ಲ. ಸರ್ಕಾರಿ ಭೂಮಿಯಲ್ಲಿ ಹೆಗ್ಗಿಲ್ಲದೇ ಜಂಬಿಟ್ಟಿಗೆಯನ್ನು ತೆಗೆಯಲಾಗುತ್ತಿದೆ. ಅಲ್ಲದೇ ಅಲ್ಲಲ್ಲಿ ಕಾಡು ಕಡಿದು, ಜಮೀನು ಮಾಡಲಾಗುತ್ತಿದೆ.

ಹಾಗಾದ್ರೇ ಸರ್ಕಾರಿ ಭೂಮಿ ಒತ್ತುವರಿಗೆ ಯಾಕಿಷ್ಟು ಮೀನಾಮೇಷ? ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಏನಾದ್ರೂ ಬಲಾಢ್ಯರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ಯಾ ಅನ್ನೋ ಅನುಮಾನ ಮೂಡುತ್ತಿದೆ. ಈ ಕೂಡಲೇ ಬರೋಬ್ಬರಿ 48 ಎಕರೆ ಸರ್ಕಾರಿ ಭೂಮಿ ಒತ್ತುವರಿಯನ್ನು ತೆರವುಗೊಳಿಸಬೇಕು. ಅಕ್ರಮವಾಗಿ ಕೆಲ ವರ್ಷಗಳಿಂದ ನಡೆದುಕೊಂಡು ಬರುತ್ತಿರೋ ಕಲ್ಲುಕ್ವಾರಿಯನ್ನು ಬಂದ್ ಮಾಡಿಸಿ, ಆ ಜಾಗವನ್ನು ಗೋಶಾಲೆಗೆ ಮೀಸಲಿಡಬೇಕು ಅನ್ನೋದು ಸಾರ್ವಜನಿಕರ ಒತ್ತಾಯವಾಗಿದೆ.

ಈ ಬಗ್ಗೆ ಸಾಗರ ತಾಲ್ಲೂಕು ಕಂದಾಯ ಅಧಿಕಾರಿಗಳು, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಕ್ರಮ ವಹಿಸಿ, ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಿ, ಗೋಶಾಲೆಗೆ ಜಾಗವನ್ನು ಮೀಸಲಿಡೋ ಕೆಲಸ ಮಾಡುತ್ತಾ ಅಂತ ಕಾದು ನೋಡಬೇಕಿದೆ.

ರಾಜ್ಯದ ‘ಕುರಿಗಾಯಿ’ಗಳಿಗೆ ಗುಡ್ ನ್ಯೂಸ್: ‘ದೌರ್ಜನ್ಯ ತಡೆ’ಗೆ ವಿಶೇಷ ಕಾಯ್ದೆ ಜಾರಿ: ಸಿಎಂ ಸಿದ್ದರಾಮಯ್ಯ ಘೋಷಣೆ

BREAKING: ‘ರಾಜ್ಯ ಸರ್ಕಾರ’ದಿಂದ 2024-25ನೇ ಸಾಲಿನ ‘ಸರ್ಕಾರಿ ನೌಕರರ ವರ್ಗಾವಣೆ’ಗೆ ಮಾರ್ಗಸೂಚಿ ಪ್ರಕಟ | Transfer Guidlines

Share. Facebook Twitter LinkedIn WhatsApp Email

Related Posts

BREAKING : ಶಿವಮೊಗ್ಗದಲ್ಲಿ ಘೋರ ದುರಂತ : ಮನೆ ಮುಂದೆ ಆಟವಾಡುತ್ತಿದ್ದ ಮಗುವಿಗೆ ಹಾವು ಕಚ್ಚಿ ಸಾವು!

16/04/2026 11:42 AM1 Min Read

ಶಾಸಕ ವಿನಯ್ ಕುಲಕರ್ಣಿಗೆ ಶಿಕ್ಷೆ ಪ್ರಮಾಣ ಪ್ರಕಟದ ತೀರ್ಪನ್ನು ಕೆಲಕಾಲ ಮುಂದೂಡಿದ ಕೋರ್ಟ್

16/04/2026 11:37 AM1 Min Read

ALERT : `PM ಲೋನ್ ಸ್ಕೀಮ್’ ಹೆಸರಲ್ಲಿ ಭಾರಿ ವಂಚನೆ: ಈ ತಪ್ಪು ಮಾಡಿದ್ರೆ ಖಾಲಿಯಾಗುತ್ತೆ ನಿಮ್ಮ ಬ್ಯಾಂಕ್ ಖಾತೆ.!

16/04/2026 11:21 AM2 Mins Read
Recent News

BREAKING : ಶಿವಮೊಗ್ಗದಲ್ಲಿ ಘೋರ ದುರಂತ : ಮನೆ ಮುಂದೆ ಆಟವಾಡುತ್ತಿದ್ದ ಮಗುವಿಗೆ ಹಾವು ಕಚ್ಚಿ ಸಾವು!

16/04/2026 11:42 AM

ಶಾಸಕ ವಿನಯ್ ಕುಲಕರ್ಣಿಗೆ ಶಿಕ್ಷೆ ಪ್ರಮಾಣ ಪ್ರಕಟದ ತೀರ್ಪನ್ನು ಕೆಲಕಾಲ ಮುಂದೂಡಿದ ಕೋರ್ಟ್

16/04/2026 11:37 AM

SHOCKING : ‘ಮಗು ಬೇಕಿದ್ದರೆ ನಿನ್ನ ಹೆಂಡತಿಯನ್ನು ನನ್ನ ಬಳಿ ಕಳುಹಿಸು’: ನಾಸಿಕ್ ‘TCS’ ಉದ್ಯೋಗಿಗೆ ಅವಮಾನಿಸಿದ ಟೀಮ್ ಲೀಡರ್!

16/04/2026 11:36 AM

BREAKING : ಲೋಕಸಭೆಯಲ್ಲಿ ಮಹತ್ವದ ‘ಕ್ಷೇತ್ರ ಮರುವಿಂಗಡಣೆ ಮಸೂದೆ’ ಮಂಡಿಸಿದ ಅಮಿತ್ ಶಾ |Delimitation Bill

16/04/2026 11:30 AM
State News
KARNATAKA

BREAKING : ಶಿವಮೊಗ್ಗದಲ್ಲಿ ಘೋರ ದುರಂತ : ಮನೆ ಮುಂದೆ ಆಟವಾಡುತ್ತಿದ್ದ ಮಗುವಿಗೆ ಹಾವು ಕಚ್ಚಿ ಸಾವು!

By kannadanewsnow0516/04/2026 11:42 AM KARNATAKA 1 Min Read

ಶಿವಮೊಗ್ಗ : ಶಿವಮೊಗ್ಗದಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಜಿಲ್ಲೆಯ ಸಾಗರದ ಎಸ್ ಎನ್ ನಗರದಲ್ಲಿ ಮನೆ ಮುಂದೆ ಆಟವಾಡುತ್ತಿದ್ದ…

ಶಾಸಕ ವಿನಯ್ ಕುಲಕರ್ಣಿಗೆ ಶಿಕ್ಷೆ ಪ್ರಮಾಣ ಪ್ರಕಟದ ತೀರ್ಪನ್ನು ಕೆಲಕಾಲ ಮುಂದೂಡಿದ ಕೋರ್ಟ್

16/04/2026 11:37 AM

ALERT : `PM ಲೋನ್ ಸ್ಕೀಮ್’ ಹೆಸರಲ್ಲಿ ಭಾರಿ ವಂಚನೆ: ಈ ತಪ್ಪು ಮಾಡಿದ್ರೆ ಖಾಲಿಯಾಗುತ್ತೆ ನಿಮ್ಮ ಬ್ಯಾಂಕ್ ಖಾತೆ.!

16/04/2026 11:21 AM

BREAKING : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ `ದೋಸೆ-ಇಡ್ಲಿ ಸಾಂಬಾರ್’ ಹಾಡು : ಬಿಸಿಸಿಐಗೆ ದೂರು ನೀಡಿದ CSK!

16/04/2026 11:09 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.