ಮೈಸೂರು : ಮಂಗಳಮುಖಿಯರು ಗುಂಪಾಗಿ ಬಂದು ಕಿರುಕುಳ ನೀಡಿದ್ದಾರೆಂದು ಬೇಸತ್ತ ಬಾಲಕನೊಬ್ಬ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹೆಜ್ಜೂರು ಗ್ರಾಮದಲ್ಲಿ ನಡೆದಿದೆ.
ಹೌದು ಮೃತ ಬಾಲಕನನ್ನು ರಾಹುಲ್ ಮೌರ್ಯ(17) ಎಂದು ಗುರುತಿಸಲಾಗಿದೆ.ಕಳೆದ ನಾಲ್ಕು ತಿಂಗಳಿನಿಂದ ರಾಹುಲ್ ಮೌರ್ಯ ನಾಪತ್ತೆಯಾಗಿದ್ದನು.ಇತ್ತೀಚಿಗೆ ಮನೆಗೆ ವಾಪಾಸ್ ಬಂದಿದ್ದ. ಈ ವೇಳೆ ಜೂನ್ 23ರಂದು ಕೆಲವು ಮಂಗಳಮುಖಿಯರಿಂದ ರಾಹುಲ್ ಮೌರ್ಯ ಕುಟುಂಬಸ್ಥರ ಜೊತೆ ಜಗಳವೂ ಉಂಟಾಗಿತ್ತು. ನೀವು ನಿಮ್ಮ ಹುಡುಗನನ್ನು ನಮ್ಮೊಂದಿಗೆ ಕಳಿಸಿಕೊಡಿ ಎಂದು ಗಲಾಟೆ ಮಾಡಿದ್ದರು.
ಜೊತೆಗೆ, ನಿಮ್ಮ ಮಗನೇ ನಮ್ಮ ಹುಡುಗಿಯನ್ನು ಕರೆದೊಯ್ದಿದ್ದಾನೆಂದು ಆರೋಪಿಸಿ ಮಂಗಳಮುಖಿಯರು ಊರಿನಲ್ಲಿ ಬಂದು ಜೋರಾಗಿ ಗಲಾಟೆಯನ್ನೂ ಮಾಡಿದ್ದರು.ಮಂಗಳಮುಖಿಯರು ಮನೆಯ ಬಳಿ ಗಲಾಟೆ ಮಾಡಿದ ದಿನ ಸಂಜೆ 5 ಗಂಟೆಗೆ ಹೆಜ್ಜೂರು ಗ್ರಾಮದ ಜಮೀನಿನಲ್ಲಿರುವ ಶೆಡ್ ನಲ್ಲಿ ರಾಹುಲ್ ಮೌರ್ಯ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇನ್ನು ಘಟನೆ ಬಗ್ಗೆ ಸೂಕ್ತ ತೆನಿಖೆ ನಡೆಸುವಂತೆ ತಂದೆ ಕುಮಾರ್ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೃತ ರಾಹುಲ್ ಮೌರ್ಯ ಎಳನೀರು ಮಾಡಿಕೊಂಡು ಜೀವನ ಕಟ್ಟಿಕೊಳ್ಳುತ್ತಿದ್ದನು. ಆದರೆ, ಈ ಸ್ಥಳಕ್ಕೆ ಬಂದು ಸ್ನೇಹ ಬೆಳೆಸಿಕೊಂಡಿದ್ದ ಮಂಗಳಮುಖಿ ತನ್ನ ಮಗನನ್ನು ಆಗಾಗ ಜೊತೆಗೆ ಕರೆದುಕೊಂಡು ಹೋಗಿ ಕಿರುಕುಳ ನೀಡಿದ್ದಾರೆಂದು ರಾಹುಲ್ ಮೌರ್ಯನ ತಂದೆ ಆರೋಪಿಸಿದ್ದಾರೆ.