ಕೊಪ್ಪಳ : ಲೈನ್ ಮ್ಯಾನ್ ನಿರ್ಲಕ್ಷತನದಿಂದ ಟಿಸಿ ರಿಪೇರಿ ಮಾಡುವಾಗ ವಿದ್ಯುತ್ ಹರಿದು ಕೂಲಿ ಕಾರ್ಮಿಕನೊಬ್ಬ ವಿದ್ಯುತ್ ಕಂಬದ ಮೇಲೇನೆ ಪ್ರಾಣ ಬಿಟ್ಟಿರುವ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹೊಸೂರು ಎಂಬ ಗ್ರಾಮದಲ್ಲಿ ನಡೆದಿದೆ.
ಮೃತ ಕೂಲಿ ಕಾರ್ಮಿಕನನ್ನು ಬಸವರಾಜ್ ಭಂಡಾರಿ (55) ಎಂದು ಹೇಳಲಾಗುತ್ತಿದೆ. ಮೃತನು ಯಲಬುರ್ಗಾ ತಾಲೂಕಿನ ಲಿಂಗನಬಂಡಿ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. ಎಲ್‌ಸಿ ಪಡೆದು ಕೆಲಸ ವಿದ್ಯುತ್ ಕಂಬವೇರಿ ರಿಪೇರಿ ಮಾಡುತ್ತಿದ್ದಾಗ ನಡೆದ ದುರ್ಘಟನೆ ವಿದ್ಯುತ್ ಹರಿದ ಪರಿಣಾಮ ಕಂಬದ ಮೇಲೆ ಪ್ರಾಣಬಿಟ್ಟಿದ್ದಾನೆ.
ಘಟನೆಗೆ ಲೈನ್ ಮ್ಯಾನ್ ಆಗಿರುವ ಶೇಕ್ ಹಸನ್ ನಿರ್ಲಕ್ಷತನವೇ ಕಾರಣ ಎಂದು ಮೃತ ಕುಟುಂಬಸ್ಥರು ಆರೋಪಿಸಿದ್ದಾರೆ. ತಾನು ಮಾಡಬೇಕಿದ್ದ ಕೆಲಸವನ್ನು ಕೂಲಿ ಕಾರ್ಮಿಕನಾಗಿದ್ದ ಬಸವರಾಜ್ ಭಂಡಾರಿಯನ್ನು ಕಂಬ ಹತ್ತಿಸಿದ್ದ ಲೈನ್‌ಮ್ಯಾನ್. ವಿದ್ಯುತ್ ರಿಪೇರಿ ಮಾಡುವಾಗ ಯಾವುದೇ ಸುರಕ್ಷಿತ ಸಲಕರಣ ಇಲ್ಲದೆ ಕಂಬವೇರಿದ್ದ. ಹಾಗಾಗಿ ಆತನ ಸವಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನೆ ಕುರಿತಂತೆ ಬೇವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.