ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಇಂದು ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರು ನಟ ದರ್ಶನ್, ಪವಿತ್ರ ಗೌಡ ಸೇರಿದಂತೆ ಬಂಧಿತ ಎಲ್ಲಾ ಆರೋಪಿಗಳನ್ನು ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಚಾರಣೆಯ ನಂತರ ನ್ಯಾಯಾಧೀಶರು, 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದರು.
ವಿಚಾರಣೆ ಆರಂಭವಾದ ನಂತರ ನಟ ದರ್ಶನ್ ಪವಿತ್ರ ಗೌಡ ಸೇರಿದಂತೆ ಎಲ್ಲಾ ಆರೋಪಿಗಳಿಗೆ ಪೊಲೀಸರು ತೊಂದರೆ ಕೊಟ್ಟಿದ್ದಾರೆ ಎಂದು ಕೇಳಿದಾಗ ಎಲ್ಲರೂ ಇಲ್ಲ ಎಂದು ತಿಳಿಸಿದರು. ನ್ಯಾಯಾಧೀಶರು, ಪೊಲೀಸರು ತೊಂದರೆ ಕೊಟ್ಟಿದ್ದಾರಾ ಎಂದು ನಟ ದರ್ಶನ್ ಹಾಗೂ ಪವಿತ್ರ ಗೌಡಗೆ ಪ್ರಶ್ನಿಸಿದ್ದಾರೆ. ಈ ವೇಳೆ ಎಸ್ ಪಿ ಪಿ ಸ್ಥಳ ಮಹಜರು ಹಾಗೂ ವಾಹನ ಸೀಸ್ ಮಾಡಿರೋ ಬಗ್ಗೆ ಮಾಹಿತಿ ನೀಡಿದರು. ಆರೋಪಿಗಳ ಬಳಿ ಇದ್ದ 10 ಮೊಬೈಲ್ ಗಳನ್ನು ಮಾಡಲಾಗಿದೆ. ಆರೋಪಿಗಳ ಮೊಬೈಲ್ ರಿಟ್ರಿವ್ ಮಾಡಬೇಕಿದೆ. ಆರೋಪಿಗಳಿಂದ 30 ಲಕ್ಷ ಹಣವನ್ನು ಕೂಡ ವಶಕ್ಕೆ ಪಡೆಯಲಾಗಿದೆ.ಅಲ್ಲದೆ ಮೈಸೂರು ಬೆಂಗಳೂರಿನ ಸ್ಥಳಗಳಲ್ಲಿ ಮಹಜರು ನಡೆಸಲಾಗಿದೆ ಎಂದು ಎಸ್ ಪಿ ಬಿ ಪಿ ಪ್ರಸನ್ನ ಕುಮಾರ್ ವಾದಿಸಿದರು.
ಜಗದೀಶ್ ಮತ್ತು ಅನು ಕುಮಾರನ್ನ ನಿನ್ನೆ ವಶಕ್ಕೆ ಪಡೆದಿದ್ದೇವೆ. ಮತ್ತಷ್ಟು ವಿಚಾರಣೆ ಹಿನ್ನೆಲೆಯಲ್ಲಿ ಆರೋಪಿಗಳ ವಶಕ್ಕೆ ಪೊಲೀಸರು ಮನವಿ ಮಾಡಿದರು. 16ನೇ ಆರೋಪಿ ನಿಖಿಲ್ ಕೋರ್ಟ್ ಮುಂದೆ ಹಾಜರು ಆಗಿದ್ದಾನೆ. ಕೋರ್ಟ್ ಮುಂದೆ ಹಾಜರುಪಡಿಸಿರುವ ಪೊಲೀಸರು ಎ-1 e-5 ನಿಂದ ಹಿಡಿದುಎ-10 ನಿಂದ ಎ 14 ಆರೋಪಿಗಳನ್ನು ಪೊಲೀಸರು ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ. ಹಾಗಾಗಿ ಮತ್ತಷ್ಟು ವಿಚಾರಣೆ ಹಿನ್ನೆಲೆಯಲ್ಲಿ ಆರೋಪಿಗಳನ್ನು 9 ದಿನ ಕಸ್ಟಡಿಗೆ ನೀಡುವಂತೆ ಪೊಲೀಸರು ಮನವಿ ಮಾಡಿದರು.ಈ ವೇಳೆ ಮುಚ್ಚಿದ ಲಕೋಟೆಯಲ್ಲಿ ವಕೀಲರು ಸಿಡಿ ಒಂದನ್ನು ನೀಡಿದರು.
ಈ ವೇಳೆ ದರ್ಶನ್ ಪರ ವಕೀಲ ಅನಿಲ್ ಬಾಬು ಸಿ ಅವರು ವಾದ ಮಂಡಿಸಿದ್ದು, ಎ-5 ಹಾಗೂ ಎ-13 ಆರೋಪಿಗಳಿಗೆ ಎಲೆಕ್ಟ್ರಿಕ್ ಶಾಕ್ ನೀಡಿದ್ದಾರೆ. ಎಲ್ಲದಕ್ಕೂ ದರ್ಶನ್ ಕಾರಣ ಎನ್ನುವುದು ಎಷ್ಟು ಸರಿ? ಹಾಗಾಗಿ ಮತ್ತೆ ಪೊಲೀಸ್ ಕಸ್ಟಡಿಗೆ ನೀಡದಂತೆ ವಕೀಲರು ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ.ಇನ್ನೂ ಇದೆ ವೇಳೆ ಪವಿತ್ರ ಗೌಡ ಅವರನ್ನು ಆರು ದಿನ ವಿಚಾರಣೆಗೆ ಒಳಪಡಿಸಿದ್ದಾರೆ ಆರೋಪಿಗಳ ಪೈಕಿ ಮಹಿಳೆ ನೋವು ಅನುಭವಿಸುತ್ತಿದ್ದಾರೆ ಕೋರ್ಟ್ ಅನುಮತಿ ಪಡೆಯದೆ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ. B ಆರೋಪಿಗಳ ಹೇಳಿಕೆ ಹೊರಗಡೆ ಸೋರಿಕೆ ಆಗುತ್ತಿದೆ ಎಂದು ಪವಿತ್ರ ಗೌಡ ಪರ ವಕೀಲ ವಾದ ಮಂಡಿಸಿದರು.