ಬೆಂಗಳೂರು : ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಅಚ್ಚರಿ ಅಭ್ಯರ್ಥಿ ಹಾಕುತ್ತೇವೆ ಎಂದು ಡಿ.ಕೆ.ಸುರೇಶ್ ಹೇಳಿದ್ದರು. ಆದರೆ ಆ ಅಚ್ಚರಿ ಅಭ್ಯರ್ಥಿ ಈಗ ಜೈಲುಪಾಲಾಗಿದ್ದಾರೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ಒಂದು ಹೇಳಿಕೆ ನೋಡಿದರೆ ದರ್ಶನ್ ಅವರೇ ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ ಎಂಬ ಅನುಮಾನಗಳು ಈಗ ದಟ್ಟವಾಗಿವೆ.
ಹೌದು ಈ ಹಿಂದೆ ಮಾಜಿ ಸಂಸದ ಡಿಕೆ ಸುರೇಶ ರವರು ಚನ್ನಪಟ್ಟಣ ಕ್ಷೇತ್ರದಿಂದ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ ಎಂದು ಸಭೆಯೊಂದರಲ್ಲಿ ಹೇಳಿಕೆ ನೀಡಿದರು ಈ ಒಂದು ಹೇಳಿಕೆಗೆ ಸಿಪಿ ಯೋಗೇಶ್ವರ ಸ್ಫೋಟಕ ಹೇಳಿಕೆ ನೀಡಿದ್ದು ಆ ಒಂದು ಅಚ್ಚರಿಯ ಅಭ್ಯರ್ಥಿ ಇದೀಗ ಜೈಲು ಪಾಲಾಗಿದ್ದಾರೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ನಿಂದ ಅಚ್ಚರಿ ಅಭ್ಯರ್ಥಿ ಹಾಕುತ್ತೇವೆ ಎಂದಿದ್ದ ಡಿ.ಕೆ.ಸುರೇಶ್ಆ ಅಚ್ಚರಿ ಅಭ್ಯರ್ಥಿ ಈಗ ಜೈಲುಪಾಲಾಗಿದ್ದಾರೆ ಎಂದ ಸಿಪಿವೈ ನಟರೊಬ್ಬರು ಕಾಂಗ್ರೆಸ್ ಪರವಾಗಿ ಹೆಚ್ಚು ಪ್ರಚಾರ ಮಾಡಿದ್ರು ಅವರನ್ನು ಕಾಂಗ್ರೆಸ್ಗೆ ಸೇರಿಸಿಕೊಂಡು ಚುನಾವಣೆಗೆ ನಿಲ್ಲಿಸಲು ಪ್ಲ್ಯಾನ್ಚುನಾವಣೆಗೆ ನಿಲ್ಲಿಸಲು ಡಿಕೆ ಬ್ರದರ್ಸ್ ಪ್ಲ್ಯಾನ್ ಮಾಡಿದ್ದ ಆ ವ್ಯಕ್ತಿ ಯಾರು ಅಂತಾ ನೀವೇ ಊಹಿಸಿಕೊಳ್ಳಿ ಎಂದು ಸಿಪಿ ಯೋಗೇಶ್ವರ್ ಹೇಳಿಕೆ ನೀಡಿದರು.
ಇತ್ತ ಇನ್ನೊಂದು ಕಡೆ ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರ ಬಂಧನವಾಗಿದೆ. ಹಾಗಾಗಿ ಡಿಕೆ ಸುರೇಶ್ ಅವರು ಹೇಳಿರುವ ಅಚ್ಚರಿಯ ಅಭ್ಯರ್ಥಿ ಹಾಗೂ ಸಿಪಿ ಯೋಗೇಶ್ವರ್ ಅವರು ಕೂಡ ಹೇಳಿರುವಂತಹ ಈ ಒಂದು ಹೇಳಿಕೆ ನೋಡಿದರೆ ದರ್ಶನ್ ಅವರೇ ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ ಎಂಬ ಅನುಮಾನಗಳು ಈಗ ದಟ್ಟವಾಗಿವೆ.