ಹಾಸನ : ಹಾಸನದಲ್ಲಿ ಸರಣಿ ಅಪಘಾತದಲ್ಲಿ ಪಲ್ಸರ್ ಬೈಕ್ ಗೆ BMW ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ಇಬ್ಬರು ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕತ್ತರಿಘಟ್ಟ ಗ್ರಾಮದಲ್ಲಿ ನಡೆದಿದೆ.
ಬಿ ಎಂ ಡಬ್ಲ್ಯೂ ಕಾರು ಡಿಕ್ಕಿಯಾಗಿ ಪಲ್ಸರ್ ಬೈಕ್ ನಲ್ಲಿ ತೆರಳುತ್ತಿದ್ದ ಇಬ್ಬರು ಸವಾರರು ಸಾವನ್ನಾಪ್ಪಿದ್ದಾರೆ. ಘಟನೆಯು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕತ್ತರಿ ಘಟ್ಟ ಗ್ರಾಮದಲ್ಲಿ ನಡೆದಿದೆ. ದೇವೇಗೌಡ ನಗರದ ಬಿಎಸ್ ಅಜಿತ್ (30) ಹಾಗೂ ಮನು (26) ಸಾವನಪ್ಪಿರುವ ದುರ್ದೈವಿಗಳು ಎಂದು ಹೇಳಲಾಗುತ್ತಿದೆ.
ಕಾರು ಡಿಕ್ಕಿ ರಭಸಕ್ಕೆ ಬೈಕ್ ಸಮೇತ ಹಳ್ಳಕ್ಕೆ ಸವಾರರು ಹಾರಿ ಬಿದ್ದಿದ್ದಾರೆ. ಬೆಂಗಳೂರಿನಿಂದ ಹಾಸನದತ್ತ ತೆರಳುತ್ತಿದ್ದ KA 06 HS 0727 ಪಲ್ಸರ್ ಬೈಕ್ ಎಂದು ಹೇಳಲಗುತ್ತಿದ್ದೂ, ನಂತರ ಕಿಯಾ ಕಾರು ಹಾಗೂ ಸರ್ಕಾರಿ ಬಸ್ಸಿಗೆ ಬಿಎಂಡಬ್ಲ್ಯೂ ಕಾರು ಡಿಕ್ಕಿ ಹೊಡೆದಿದೆ. ಸರಣಿ ಅಪಘಾತದ ಬಳಿಕ, ಪಕ್ಕದಲ್ಲಿರುವ ಕೆರೆಗೆ ಹಾರಿ ಬಿದ್ದಿದೆ.ಘಟನೆ ಕುರಿತಂತೆ ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.