ಬೆಂಗಳೂರು : ಇಂಜಿನಿಯರ್ ಪದವಿಧರರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ, ನೆಲಮಂಗಲದ ಮಾಜಿ ಶಾಸಕ ಡಾ.ಶ್ರೀನಿವಾಸಮೂರ್ತಿ ಗನ್ ಮ್ಯಾನ್ ಒಬ್ಬ ಲಕ್ಷಾಂತರ ರೂಪಾಯಿ ವಂಚಿಸಿರುವ ಆರೋಪ ಕೇಳಿ ಬಂದಿದೆ.
ಹೌದು ಸುಮಾರು 10 ವರ್ಷಗಳ ಕಾಲ ನೆಲಮಂಗಲದ ಮಾಜಿ ಶಾಸಕ ಡಾ. ಶ್ರೀನಿವಾಸ್ ಗೌಡ ಗನ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸಿದ್ದ ವೆಂಕಟೇಶ್ ಎಂಬಾತ ವಿಧಾನಸೌಧದಲ್ಲಿ ಸರ್ಕಾರಿ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿ ಹಣಪೀಕಿದ ಆರೋಪದ ಹಿನ್ನಲೆ ದಾಬಸ್ ಪೇಟೆ ನಿವಾಸಿ ಸುನಂದಾ ಅವರು ಠಾಣೆಗೆ ದೂರು ದಾಖಲಿಸಿದ್ದಾರೆ.
ಇಂಜಿನಿಯರಿಂಗ್ ಪದವೀಧರರಾದ ತನ್ನ ಎರಡು ಹೆಣ್ಣು ಮಕ್ಕಳಿಗೆ ಉದ್ಯೋಗ ಕೊಡಿಸುತ್ತೇನೆ ಎಂದು ಬರೋಬ್ಬರಿ 16.50 ಲಕ್ಷ ಹಣ ಪೀಕಿರುವ ಗನ್ ಮ್ಯಾನ್, ಇತ್ತ ಕೆಲಸವೂ ಕೊಡಿಸದೇ, ಹಣವೂ ನೀಡದೆ ಸತಾಯಿಸುತ್ತಿದ್ದ. ಡಿಸೆಂಬರ್ 2022 ರಿಂದಲೂ ಕೆಲಸ ಕೊಡಿಸೊದಾಗಿ ನಂಬಿಸಿದ್ದ ವೆಂಕಟೇಶ್, ಪೋನ್ ಪೇ ಮೂಲಕ ಹಾಗೂ ನಗದು ರೂಪದಲ್ಲಿ 25 ಬಾರಿ ಹಣ ಪಡೆದಿದ್ದಾನೆ. ಈ ಹಿನ್ನಲೆ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಐಪಿಸಿ 1860-406,420 ಅಡಿ ದೂರು ದಾಖಲಾಗಿದೆ.