ಚಿತ್ರದುರ್ಗ : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಆತನನ್ನು ಕಿಡ್ನ್ಯಾಪ್ ಮಾಡಿದ ಸ್ಥಳ ಮಹಜರಿಗಾಗಿ ಒಂದು ತಂಡ ಚಿತ್ರದುರ್ಗಕ್ಕೆ ತೆರಳಿದೆ ಎಂದು ತಿಳಿದುಬಂದಿದೆ.
ಹೌದು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಘವೇಂದ್ರ, ಜಗದೀಶ್, ಅನು,ರಾಜು ಹಾಗೂ ರವಿಯಿಂದ ರೇಣುಕಾ ಸ್ವಾಮಿಯನ್ನು ಕಿಡ್ನಾಪ್ ಮಾಡಲಾಗಿತ್ತು. ಚಿತ್ರದುರ್ಗ ಮೂಲದ ಜಗದೀಶ್, ಅನು, ರವಿ ಹಾಗೂ ರಾಜು ಎಂದು ಹೇಳಲಾಗುತ್ತಿದೆ. ಚಿತ್ರದುರ್ಗದ ಚಳ್ಳಕೆರೆ ರೇಣುಕಾ ಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಆಟೋದಲ್ಲಿ ಚಿತ್ರದುರ್ಗದ ಹೊಲ ಹೊರಗೆ ಕರೆದು ಹೋಗಿದ್ದರು ಎಂದು ತಿಳಿದುಬಂದಿದೆ.
ಚಿತ್ರದುರ್ಗದ ಹೊರವಲಯದಲ್ಲಿ ಆಟೋದಿಂದ ನಂತರ ರೇಣುಕಾಸ್ವಾಮಿಯನ್ನು ಕಾರಿಗೆ ಶಿಫ್ಟ್ ಮಾಡಿದ್ದಾರೆ. ಬಾಡಿಗೆಗೆ ಎಂದು ಹೇಳಿ ಕಾರು ಚಾಲಕ ರವಿಯನ್ನು ಕರೆಸಿಕೊಂಡಿದ್ದರು. ದರ್ಶನ್ ಭೇಟಿ ಮಾಡಿಸುತ್ತೇನೆ ಎಂದು ರಘು ರೇಣುಕಾ ಸ್ವಾಮಿಗೆ ನಂಬಿಸಿದ್ದ ಎನ್ನಲಾಗಿದೆ. ದರ್ಶನ್ ಭೇಟಿ ಮಾಡಲು ರೇಣುಕಾ ಸ್ವಾಮಿ ಖುಷಿಯಿಂದ ಹೋಗಿದ್ದ.ಸದ್ಯ ರಾಘವೇಂದ್ರನನ್ನು ಪೊಲೀಸರು ಬಂಧಿಸಿದ್ದು ಇನ್ನುಳಿದ ಆರೋಪಿಗಳು ನಾಪತ್ತೆಯಾಗಿದ್ದಾರೆ.