ಬೆಂಗಳೂರು : ನನಗೆ ಪತ್ನಿ ಗೌರ ಕೊಡುತ್ತಿಲ್ಲ ಮಾನಸಿಕ ಹಿಂಸೆ ಆಗುತ್ತಿದೆ ಎಂದು ನಟ ಯುವರಾಜ್ ಕುಮಾರ್ ಕೋರ್ಟಿಗೆ ಸಲ್ಲಿಸಿದ್ದ ವಿಚ್ಛೇದನದ ಅರ್ಜಿಯಲ್ಲಿ ಉಲ್ಲೇಖಿಸಿದ್ದು, ಕೋರ್ಟ್ ಮೂಲಕ ಪತ್ನಿ ಶ್ರೀದೇವಿಗೆ ನೋಟಿಸ್ ತಲುಪಿಸಿದ್ದರು. ಇದೀಗ ನೋಟಿಸ್ ಗೆ ಪತ್ನಿ ಶ್ರೀದೇವಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಈಗಾಗಲೇ ಲೀಗಲ್ ನೋಟಿಸಿದ ಬಗ್ಗೆ ಉತ್ತರಿಸಿದ್ದೇನೆ. ವಿಚ್ಛೇದನದ ಅರ್ಜಿ ಇನ್ನು ಕೂಡ ನನಗೆ ತಲುಪಿಲ್ಲ. ಅರ್ಜಿ ತಲುಪಿದರೆ ನ್ಯಾಯಾಲಯಕ್ಕೆ ನಾನು ಉತ್ತರ ಕೊಡುತ್ತೇನೆ. ವಿಚ್ಛೇದನದ ಬಗ್ಗೆ ಚಿತ್ರರಂಗ ಮಾಧ್ಯಮದವರಿಂದ ಮಾಹಿತಿ ತಿಳಿದುಬಂದಿದೆ. ಸದ್ಯಕ್ಕೆ ಬೇರೇನು ಮಾತನಾಡುವ ಸ್ಥಿತಿಯಲ್ಲಿ ನಾನು ಇಲ್ಲ. ವಿಚ್ಛೇದನದ ಬಗ್ಗೆ ಶ್ರೀದೇವಿ ಮೊದಲ ಪತ್ರಿಕೆಯ ನೀಡಿದ್ದಾರೆ.
ದೊಡ್ಮನೆ ರಾಜಕುಮಾರ್ ಕುಟುಂಬದ ನಟ ಯುವರಾಜ್ ಕುಮಾರ್ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ವಿಚ್ಛೇದನಕ್ಕೆ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ನನಗೆ ಮಾನಸಿಕವಾಗಿ ಹಿಂಸೆ ನೀಡಲಾಗುತ್ತಿದೆ ಎಂದು ಆರೋಪಿಸಿ ಕೋರ್ಟ್ ಮೂಲಕ ಯುವರಾಜ್ ಕುಮಾರ್ ಪತ್ನಿ ಶ್ರೀದೇವಿಗೆ ನೋಟಿಸ್ ಕೂಡ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಆರು ತಿಂಗಳಿನಿಂದ ಪತ್ನಿ ಶ್ರೀದೇವಿಯಿಂದ ದೂರವಿರುವ ನಟ ಯುವರಾಜ್ ಕುಮಾರ್ ಅವರು ವಿಚ್ಚೇದನಕ್ಕೆ ಫ್ಯಾಮೀಲಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ರಾಜ್‌ಕುಮಾರ್ ಅಲಿಯಾಸ್ ಯುವ ರಾಜ್‌ಕುಮಾರ್ ಅವರು ಫ್ಯಾಮಿಲಿ ಕೋರ್ಟ್ನಲ್ಲಿ ಡಿವೋರ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದ್ದು, ಸದ್ಯ ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಕಾಯಲಾಗುತ್ತಿದೆ.
ಯುವ ರಾಜ್‌ಕುಮಾರ್ 2019 ಮೇ 26ರಂದು ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನಲ್ಲಿ ಶ್ರೀದೇವಿ ಭೈರಪ್ಪ ಎಂಬುವವರನ್ನು ಮದುವೆಯಾದರು. ಶ್ರೀದೇವಿ ಮೂಲತಃ ಸಾಂಸ್ಕೃತಿಕ ನಗರಿ ಮೈಸೂರಿನವರು. ಇವರಿಬ್ಬರು ಏಳು ವರ್ಷಗಳಿಂದ ಪರಸ್ಪರ ಸ್ನೇಹಿತರಾಗಿದ್ದರು. ಈ ಸ್ನೇಹ ಪ್ರೀತಿಗೆ ತಿರುಗಿ ಮದುವೆಯಾದರು.
ಡಿವೋರ್ಸ್ ವಿಚಾರಕ್ಕೆ ಈಗಾಗಲೇ ಪತ್ನಿಗೆ ನೋಟಿಸ್ ನೀಡಲಾಗಿದೆ. ಪತ್ನಿ ಶ್ರೀದೇವಿಯಿಂದ ವಿಚ್ಚೆದನ ಕೋರಿ ಅರ್ಜಿ ಸಲ್ಲಿಸಲಾಗಿದ್ದು, ಭಾರತೀಯ ವಿವಾಹ ಕಾಯ್ದೆ 13 (1) ರಅಡಿ ಕೋರ್ಟಿಗೆ ಅರ್ಜಿ ಸಲ್ಲಿಸಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಕೂಡ ವಿಜೇತನ ಪಡೆದಿದ್ದು ಭಾರಿ ಸುದ್ದಿಯಾಗಿತ್ತು.