ದಾವಣಗೆರೆ : ದೇಶ ಎಷ್ಟೇ ಮುಂದುವರೆದರು ಎಷ್ಟೇ ಅಭಿವೃದ್ಧಿ ಹೊಂದಿದರು ಕೂಡ ರೈತರು ಆತ್ಮಹತ್ಯೆ ಮಾಡಿಕೊಳ್ಳೋದು ನಿಂತಿಲ್ಲ. ಇದೀಗ ರೈತನೊಬ್ಬ ಬ್ಯಾಂಕ್ ನಲ್ಲಿ ಸಾಲ ಮಾಡಿದ್ದ. ಬರಗಾಲದ ಹೊಡೆತ ಹಾಗೂ ಅವಮಾನ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ದಾವಣಗೆರೆ ತಾಲೂಕಿನ ಗುಡಾಳ್ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ.
ಹನುಮಂತಪ್ಪ(42) ಆತ್ಮಹತ್ಯೆ ಮಾಡಿಕೊಂಡ ರೈತ. ಮನೆ ಮೇಲೆ 4 ಲಕ್ಷ್, ಕುರಿ ಮೇಲೆ 2.60 ಲಕ್ಷ ರೂ. ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಸಾಲ ಮಾಡಿದ್ದ ರೈತ. ಆದರೆ ಮರುಪಾವತಿಸಲು ಸಾಧ್ಯವಾಗದ್ದರಿಂದ ರೈತನಿಗೆ ನೋಟಿಸ್ ನೀಡಿದ್ದ ಬ್ಯಾಂಕ್. ಸಾಲ ಮರುಪಾವತಿ ಮಾಡದ ಹಿನ್ನೆಲೆ ಮನೆ ಹರಾಜಿಗೆ ಬ್ಯಾಂಕ್ ನೋಟಿಸ್ ನೀಡಿತ್ತು.
ಇಷ್ಟು ದೊಡ್ಡ ಮಟ್ಟದ ಸಾಲ ಮಾಡಿದ್ದ ಹನುಮಂತಪ್ಪ ಸಾಲ ತೀರಿಸಲಾಗದೆ ಒದಡುತ್ತಿದ್ದ ಒಂದು ಕಡೆ ಮನೆ ಹರಾಜಿಗೆ ಬಂದಂತಹ ಬ್ಯಾಂಕ್ ನವರಿಂದ ಅವಮಾನ ಇನ್ನೊಂದು ಕಡೆ ಬರಗಾಲದಿಂದ ಕೈಕೊಟ್ಟ ಬೆಳೆ ಹೀಗಾಗಿ ಹೆದರಿಕೊಂಡು ರೈತ ಹನುಮಂತಪ್ಪ ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ದಾವಣಗೆರೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.