ಬೆಂಗಳೂರು : ಟೆರೆಸ್ ಮೇಲೆ ಬಟ್ಟೆ ತರಲು ಹೋದಾಗ ಪಕ್ಕದಲ್ಲಿದ್ದ ಮಾವಿನ ಕಾಯಿ ಕೀಳಲು ಹೋದ ಬಾಲಕ ವಿದ್ಯುತ್ ತಂತಿ ಸ್ಪರ್ಶಿಸಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ.ಮೃತ ಬಾಲಕನನ್ನು 9ನೇ ತರಗತಿಯ ಸಾಯಿ ಭುವನ್ ಎಂದು ತಿಳಿದುಬಂದಿದೆ.
ಹೌದು ಇಂದು ಬೆಳಿಗ್ಗೆ ಈ ಘಟನೆ ನಡದ್ದಿದ್ದು, ಹೊಸಕೋಟೆ ನಗರದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿದ್ದು ಓದುತ್ತಿದ್ದ ಅಣ್ಣ-ತಮ್ಮ ಟೆರೆಸ್ ಮೇಲೆ ಹಾಕಿದ್ದ ಬಟ್ಟೆ ತರಲು ಹೋಗಿದ್ದರು. ಈ ವೇಳೆ ಅಲ್ಲೇ ಇದ್ದ ಮರದಲ್ಲಿ ಬಿಟ್ಟಿದ ಮಾವಿನ ಹಣ್ಣನ್ನು ಕೀಳಲು ಹೋಗಿದ್ದು ಓರ್ವ ಬಾಲಕನಿಗೆ ವಿದ್ಯುತ್ ಸ್ಪರ್ಶಿಸಿ ಬಾಲಕ ಮಹಡಿ ಮೇಲಿದ್ದ ಕೆಳಕ್ಕೆ ಬಿದ್ದಿದ್ದಾನೆ. ಆಸ್ಪತ್ರೆಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ಇಂದು ಬೆಳಿಗ್ಗೆ ಎಂದಿನಂತೆ ಒಣಗಿರುವ ಬಟ್ಟೆ ತರಲು ಅಣ್ಣ ತಮ್ಮ ಇಬ್ಬರೂ ಟೆರೇಸ್ ಮೇಲೆ ಹೋಗಿದ್ದಾರೆ. ಈ ವೇಳೆ ಪಕ್ಕದಲ್ಲಿದ್ದ ಮಾವಿನ ಕಾಯಿ ನೋಡಿ ಸಾಯಿ ಭುವನ್ ಮಾವಿನಕಾಯಿ ವಿದ್ಯುತ್ ಸ್ಪರ್ಶಿಸಿ ಬಿಲ್ಡಿಂಗ್ ಮೇಲಿಂದ ಕೆಳಗೆ ಬಿದ್ದಿದ್ದಾನೆ ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಿದ್ದಾದರೂ ಚಿಕಿತ್ಸೆ ಬಲಿಸದೆ ಸಾವನ್ನಪ್ಪಿದ್ದಾನೆ.ಅಣ್ಣ ತಮ್ಮ ಇಬ್ಬರೂ ಕಳೆದ ಎರಡು ವರ್ಷಗಳಿಂದ ವಸತಿ ಶಾಲೆಯಲ್ಲಿ ಓದುತ್ತಿದ್ದರು. ಮಗನನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.