ಬೆಂಗಳೂರು : ಇತ್ತೀಚಿಗೆ ಬೆಂಗಳೂರಿನ ಜ್ಞಾನಭಾರತಿ ವಿವಿ ಹಾಸ್ಟೆಲ್ ನಲ್ಲಿ ಕಳಪೆ ಆಹಾರ ಸೇವಿಸಿ ಹಲವು ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ಮಾಸುವ ಮುನ್ನವೇ, ಇದೀಗ ಹಾಸ್ಟೆಲ್ ನಲ್ಲಿ ಮತ್ತೊಂದು ಘಟನೆ ನಡೆದಿದ್ದು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ ವೇಳೆ ಹಾಸ್ಟೆಲ್ ಊಟದಲ್ಲಿ ಹುಳು ಪತ್ತೆಯಾಗಿರುವ ಘಟನೆ ನಡೆದಿದೆ.
ಹೌದು ಬೆಂಗಳೂರಿನ ಜ್ಞಾನಭಾರತಿ ವಿವಿ ಹಾಸ್ಟೆಲ್ ನಲ್ಲಿ ಊಟದಲ್ಲಿ ಮತ್ತೆ ಹುಳ ಪತ್ತೆಯಾಗಿರುವ ಘಟನೆ ನಡೆದಿದೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ದಿಢೀರ್ ಭೇಟಿಯ ವೇಳೆ ಹುಳು ಪತ್ತೆಯಾಗಿದೆ. ಚಿಕ್ಕಬಳ್ಳಾಪುರ ಸಮಾಜ ಕಲ್ಯಾಣ ಇಲಾಖೆಯ ಡಿಡಿ ಅಶೋಕ್ ಬೇಟಿ ವೇಳೆ ಹುಳು ಪತ್ತೆಯಾಗಿದೆ.
ಜ್ಞಾನಭಾರತಿ ವಿವಿ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಆಗಿದೆ ಉಪ ನಿರ್ದೇಶಕ ಅಶೋಕ ಆಹಾರ ಪರಿಶೀಲನೆ ವೇಳೆ ಅನ್ನದಲ್ಲಿ ಹುಳು ಪತ್ತೆಯಾಗಿದೆ.ಈ ವೇಳೆ ವಿದ್ಯಾರ್ಥಿಗಳ ತಟ್ಟೆಯಲ್ಲಿದ್ದ ಊಟದಲ್ಲಿ ಹುಳ ಕಂಡು ಅಶೋಕ್ ಗರಂ ಆಗಿದ್ದರೆ. ಅಡುಗೆ ಸಿಬ್ಬಂದಿ ವಿರುದ್ಧ ಸಮಾಜ ಕಲ್ಯಾಣ ಇಲಾಖೆ ಡಿಡಿ ಅಶೋಕ್ ಕಿಡಿ ಕಾರಿದ್ದಾರೆ.