ಬೆಂಗಳೂರು : ವೇಗವಾಗಿ ಬಂದಂತಹ ಟಿಪ್ಪರ್ ಒಂದು ಬೈಕಿಗೆ ಗುದ್ದಿದ ಪರಿಣಾಮ ಬೈಕ್ ಮೇಲೆ ಪ್ರಯಾಣಿಸುತ್ತಿದ್ದ ಯುವಕನೊಬ್ಬ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸರ್ಜಾಪುರದ ಬಳಿ ಈ ಒಂದು ಅಪಘಾತ ಸಂಭವಿಸಿದೆ.
ಹೌದು ಸರ್ಜಾಪುರದಲ್ಲಿ ಟಿಪ್ಪರ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸರ್ಜಾಪುರದಲ್ಲಿ ಈ ಅಪಘಾತ ಸಂಭವಿಸಿದೆ. ಪೀಣ್ಯ ದಾಸರಹಳ್ಳಿ ಮೂಲದ ಬೈಕ್ ಸವಾರ ನವೀನ್ (25) ದಾರುಣವಾಗಿ ಸಾವನ್ನಪ್ಪಿದ್ದಾನೆ. ವೇಗವಾಗಿ ಬಂದು ಬೈಕಿಗೆ ಟಿಪ್ಪರ್ ಡಿಕ್ಕಿ ಹೊಡೆದಿದ್ದರಿಂದ ಈ ಒಂದು ದುರಂತ ಸಂಭವಿಸಿದೆ.
ಲಾರಿ ಚಾಲಕನ ಬೇಜವಾಬ್ದಾರಿಗೆ ಬೈಕ್ ಸವಾರ ನವೀನ್ ಬಲಿಯಾಗಿದ್ದಾನೆ.ಲಾರಿ ಚಾಲಕರ ಕ್ರಾಶ್ ಡ್ರೈವಿಂಗ್‌ಗೆ ಪೊಲೀಸರು ಕಡಿವಾಣ ಹಾಕದೆ ಇರುವುದರಿಂದ ದಿನಕ್ಕೊಂದು ಅಪಘಾತವಾಗಿ ಸಾವು ನೋವು ಸಂಭವಿಸುತ್ತಿದ್ದರೂ ಕೂಡ ಮೌನವಹಿಸಿದ್ದಾರೆ. ಪೊಲೀಸರ ನಿರ್ಲಕ್ಷದಿಂದ ಸವರಾರ ಪಾದಚಾರಿಗಳ ಪ್ರಾಣಕ್ಕೆ ಕುತ್ತುಬರುತ್ತದೆ ಎಂದು ಸರ್ಜಾಪುರ ಠಾಣೆ ಪೊಲೀಸರ ವಿರುದ್ಧ ಇದೀಗ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.