ಬೆಂಗಳೂರು : ಸಹೋದರಿಯ ಪರ ನ್ಯಾಯ ಕೇಳಲು ತೆರಳಿದ್ದವ ಬಾಮೈದನನ್ನು ಚಾಕುವಿನಿಂದ ಭೀಕರವಾಗಿ ಇರಿದು ಕೊಂದ ಭಾವ, ಹತ್ಯೆಗೈದ ನಂತರ ಅಲ್ಲಿಂದ ಪರಾರಿಯಾಗಿರುವ ಘಟನೆ ಬೆಂಗಳೂರಿನ ಕುವೆಂಪು ನಗರದ ಐ ಬ್ಲಾಕ್‌ನಲ್ಲಿ ಇಂದು ನಡೆದಿದೆ.
ಬಾಮೈದ ಅಭಿಷೇಕ್ ಮೇಲೆ ಬಾವ ರವಿಕುಮಾರ್ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಅಭಿಷೇಕ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಕುವೆಂಪು ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಪೋಲಿಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕುವೆಂಪು ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವಕನ ಕೊಂದು ಶವ ಬೀಸಾಡಿದ ದುಷ್ಕರ್ಮಿಗಳು
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಗುಳಬಾಳ ಗ್ರಾಮದಲ್ಲಿ ದುಷ್ಕರ್ಮಿಗಳು ಯುವಕನನ್ನು ಕೊಂದು ಶವ ಬೀಸಾಡಿದ್ದಾರೆ. ಜಮೀನಿನಲ್ಲಿ ಮಹಾಂತೇಶ ಬಿರಾದಾರ್ (25) ಮೃತದೇಹ ಪತ್ತೆಯಾಗಿದೆ. ಮಹಾಂತೇಶ್ ನನ್ನು ಕೊಂದಿದ್ದಾರೆಂದು ಸಹೋದರ ಮಂಜುನಾಥ್ ಆರೋಪಿಸಿದ್ದಾರೆ. ಸ್ಥಳಕ್ಕೆ ಬಸವನ ಬಾಗೇವಾಡಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.