ಬೆಂಗಳೂರು : ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸಿನಿಮಾ ಸ್ಟೈಲ್ ಮಾದರಿಯಲ್ಲಿ ರಸ್ತೆ ಮೇಲೆ ವೇಗವಾಗಿ ಬಂದಂತಹ ಕಾರು ಡಿವೈಡರ್ಗೆ ಬುದ್ಧಿ ಪಕ್ಕದಲ್ಲಿರುವ ಕೆರೆಗೆ ಬಿದ್ದಿದೆ. ಘಟನೆಯಲ್ಲಿ ನಾಲ್ವರಿಗೆ ಗಂಭೀರವಾದ ಗಾಯಗಳಾಗಿವೆ.
ಹೌದು ಬೆಂಗಳೂರು ಮೈಸೂರು ದಶಪಥ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ರಸ್ತೆ ಬದಿಯ ಡಿವೈಡರ್ ಗೆ ಗುದ್ದಿ ಕಾರು ಕೆರೆಗೆ ಬಿದ್ದಿದೆ. ಸಿನಿಮಾ ಸ್ಟೈಲ್ ಮಾದರಿಯಲ್ಲಿ ಕೆರೆಗೆ ಬಿದ್ದ ಕಾರು. ಘಟನೆಯಲ್ಲಿ ನಾಲ್ವರಿಗೆ ಗಂಭೀರವಾದಂತಹ ಗಾಯಗಳಾಗಿದೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.
ಘಟನೆಯು ರಾಮನಗರದ ಸಂಕಲಗೆರೆ ಗೇಟ್ ಬಳಿ ಈ ಒಂದು ಅಪಘಾತ ಸಂಭವಿಸಿದೆ. ಹೆದ್ದಾರಿಯಿಂದ ಸರ್ವಿಸ್ ರಸ್ತೆ ಹೇಗೆ ಬರುವ ವೇಳೆ ವೇಗವಾಗಿ ಬಂದಂತಹ ಕಾರು ನಿಯಂತ್ರಣ ಕಳೆದುಕೊಂಡು ಕೆರೆಗೆ ಬಿದ್ದಿದೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.