ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಡೀ ರಾಜ್ಯವೇ ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು, ಚಿಟ್ ಫಂಡ್ಸ್ ಹಣದ ವಿಚಾರವಾಗಿ ವ್ಯಕ್ತಿಯೊಬ್ಬನ ಭೀಕರ ಕೊಲೆಯಾಗಿದ್ದು, ಮನೆಯಲ್ಲಿಯೇ ವ್ಯಕ್ತಿಯನ್ನು ಕೊಲೆಗೈದು ದೇಹವನ್ನು ಕತ್ತರಿಸಿ ಮೃತ ದೇಹವನ್ನು ಪೀಸ್ ಪೀಸ್ ಮಾಡಿ ಎರಡು ಚೀಲಗಳಲ್ಲಿ ತುಂಬಿ ಮೋರಿಗೆ ಎಸೆದಿರುವ ಘಟನೆ ಬೆಂಗಳೂರಿನ ಸಂಪಿಗೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಥಣಿಸಂದ್ರದಲ್ಲಿ ನಡೆದಿದೆ.
ಮಾರ್ಗದರ್ಶಿ ಚಿಟ್ ಫಂಡ್ ನಲ್ಲಿ ಮೃತ ಕೆವಿ ಶ್ರೀನಾಥ್(34) ಕೆಲಸ ಮಾಡುತ್ತಿದ್ದರು. ಈ ವೇಳೆ ಹಣದ ಕಂತು ಕಟ್ಟುವ ವಿಚಾರವಾಗಿ ಶ್ರೀನಾಥ್ ಹಾಗೂ ಆರೋಪಿ ಮಾಧವ್ ರಾವ್ ಇಬ್ಬರ ನಡುವೆ ವೈ ಮನಸು ಇರುತ್ತೆ. ಕಳೆದ 28ರಂದು ಮಾಧವ್ ರಾವ್ ಮನೆಗೆ ಶ್ರೀನಾಥ್ ಹೋಗಿರುತ್ತಾರೆ. ಇಬ್ಬರಿಗೂ ಜಗಳವಾಗುತ್ತದೆ. ಇಬ್ಬರ ನಡುವೆ ಜಗಳವಾದ ಅಲ್ಲಿಯೇ ಇದ್ದ ವಸ್ತು ತೆಗೆದುಕೊಂಡು ಶ್ರೀನಾಥ್ ತಲೆಗೆ ಆರೋಪಿ ಮಾಧವ್ ರಾವ್ ಹೊಡೆಯುತ್ತಾನೆ.
ನಂತರ ಶ್ರೀನಾಥ್ ಮೃತ ದೇಹವನ್ನು ಮಚ್ಚಿನಿಂದ ತುಂಡು ತುಂಡು ಕತ್ತರಿಸಿ ಮಧ್ಯರಾತ್ರಿ ಶ್ರೀನಾಥ್ ಮೃತದೇಹವನ್ನು 3 ಪ್ಲಾಸ್ಟಿಕ್ ಕವರ್ ನಲ್ಲಿ ತುಂಬಿಕೊಂಡು ಸಮೀಪದಲ್ಲಿರುವ ಮೋರಿಯಲ್ಲಿ ಬಿಸಾಕಿರುತ್ತಾನೆ. ತದನಂತರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಮಾಧವ್ ರಾವ್ ಆಂಧ್ರಪ್ರದೇಶಕ್ಕೆ ಪರಾರಿಯಾಗಿರುತ್ತಾನೆ.
ಮೃತ ಶ್ರೀನಾಥ್ ಪತ್ನಿ ತನ್ನಪತಿ ಕಾಣೆಯಾಗಿರುವ ಬಗ್ಗೆ ಸಂಪಿಗೆಹಳ್ಳಿ ಠಾಣೆಗೆ ದೂರು ನೀಡಿರುತ್ತಾರೆ. ನಂತರ ಈ ಒಂದು ಪ್ರಕರಣ ಸಂಪಿಗೆಹಳ್ಳಿಯ ಪೊಲೀಸ್ ಠಾಣೆಯಿಂದ ರಾಮಮೂರ್ತಿನಗರ ಪೊಲೀಸ್ ಠಾಣೆಗೆ ವರ್ಗಾವಣೆ ಆಗುತ್ತದೆ. ಇದೀಗ ಪೊಲೀಸರು ಆರೋಪಿ ಮಾಧವ್ ರಾವ್ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.