ಹುಬ್ಬಳ್ಳಿ : ಲೋಕಸಭಾ ಚುನಾವಣೆ 2024 ರ ಫಲಿತಾಂಶ ಕೆಲವೇ ಗಂಟೆಗಳಲ್ಲಿ ಹೊರಬೀಳಲಿದ್ದು, ಬಿಗಿ ಭದ್ರತೆಯ ನಡುವೆ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ.
ಲೋಕಸಭಾ ಚುನಾವಣೆಯಲ್ಲಿ NDAಗೆ ಕಡಿಮೆ ಸ್ಥಾನ ಹಿನ್ನೆಲೆ ಫಲಿತಾಂಶ ನೋಡಿ ಹೃದಯಾಘಾತದಿಂದ ವ್ಯಕ್ತಿ ಮೃತಪಟ್ಟ ಘಟನೆ ಹುಬ್ಬಳ್ಳಿಯ ಲಿಂಗರಾಜ ನಗರದಲ್ಲಿ ನಡೆದಿದೆ. ಶಿವಪ್ರಕಾಶ್ ಹಿರೇಮಠ ಎಂಬ ವ್ಯಕ್ತಿ ಮೃತ ದುರ್ದೈವಿ. ಕಟ್ಟಾ ಬಿಜೆಪಿ ಅಭಿಮಾನಿಯಾಗಿದ್ದ ಶಿವಪ್ರಕಾಶ್, ಮನೆಯಲ್ಲಿ ಟಿವಿ ನೋಡುವಾಗ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಲೋಕಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಇಲ್ಲಿಯವರೆಗೆ ಬಿಜೆಪಿ 238, ಕಾಂಗ್ರೆಸ್ 97, ಎಸ್ಪಿ 33, ಟಿಎಂಸಿ 29, ಡಿಎಂಕೆ 21, ಜೆಡಿಯು 15, ಎಸ್ಎಸ್ (ಉದ್ಧವ್ ಠಾಕ್ರೆ ಬಣ) 10, ಎಸ್ಎಸ್ ಶಿಂಧೆ 6, ಟಿಡಿಪಿ 16, ವೈಎಸ್ಆರ್ಸಿಪಿ 4, ಎಎಪಿ 3 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.