ಕೆಎನ್ ಎನ್ ಡಿಜಿಟಲ್ ಡೆಸ್ಕ್ : ತಾಯಿ ಎದೆ ಹಾಲು ಸರ್ವಶ್ರೇಷ್ಠ. ತಾಯಿ ಹಾಲನ್ನು ಅಮೃತಕ್ಕೆ ಹೋಲಿಸುತ್ತಾರೆ. ಹೀಗೆ ಹೇಳಲು ಅನೇಕ ವೈಜ್ಞಾನಿಕ ಕಾರಣಗಳಿವೆ. ಹಾಗಿದ್ದರೆ ಬನ್ನಿ ಮಗುವಿಗೆ ತಾಯಿಯ ಎದೆ ಹಾಲು ಪಾನದಿಂದಾಗು ಪ್ರಯೋಜನಗನ್ನು ತಿಳಿದುಕೊಳ್ಳೋಣ.
ಆದರೆ ಕೆಲ ತಾಯಂದಿರು ಈ ಸ್ತನ್ಯಪಾನದ ಕುರಿತು ಕೆಲ ತಪ್ಪು ತಿಳುವಳಿಕೆಯನ್ನು ಹೊಂದಿದ್ದಾರೆ. ಹಾಗಾದರೆ ನಿಮ್ಮ ಮಗುವಿಗೆ ಎಷ್ಟು ದಿನಗಳವರೆಗೆ ಹಾಲುಣಿಸಬೇಕು ಎಂಬ ಮಾಹಿತಿ ಇಲ್ಲಿದೆ ನೋಡಿ.
ನವಜಾತ ಶಿಶುವಿಗೆ ತಾಯಿಯ ಎದೆಹಾಲು ಕುಡಿಯುವುದನ್ನು ನಿಸರ್ಗವೇ ಹೇಳಿಕೊಡುತ್ತದೆ. ದಿನ ಕಳೆದಂತೆ ನಿಧಾನವಾಗಿ ಅದು ಎದೆ ಹಾಲು ಸೇವಿಸಲು ಶುರು ಮಾಡುತ್ತದೆ. ಆದರ ಕಲಿಕೆ ಹಾಗೂ ಹಸಿವಿನ ಅಗತ್ಯತೆಗೆ ಅನುಗುಣವಾಗಿ ಹಾಲಿನ ಪ್ರಮಾಣವೂ ಹೆಚ್ಚಾಗುತ್ತದೆ.
ತಾಯಿ ಎದೆ ಹಾಲು ಮಗುವಿಗೆ ಪ್ರೋಟೀನ್, ಕ್ಯಾಲ್ಸಿಯಂ, ಕೊಬ್ಬು, ವಿಟಮಿನ್ ಎ ಪೋಷಕಾಂಶಗಳನ್ನು ಜೀವನ ಪರ್ಯಂತ ಒದಗಿಸಿಕೊಡುತ್ತದೆ. ಹಾಗು ಹೆಚ್ಚು ದಿನಗಳ ಕಾಲ ಸ್ತನ್ಯಪಾನ ಮಾಡಿದ ಮಗು ಹೆಚ್ಚು ರೋಗ ನಿರೋಧಕ ಶಕ್ತಿಯನ್ನೂ ಹೊಂದಿರುತ್ತದೆ.
ಇನ್ನು ಯಾವ ತಾಯಿ ತನ್ನ ಮಗುವಿಗೆ ಹೆಚ್ಚು ದಿನಗಳ ಕಾಲ ಹಾಲುಣಿಸುತ್ತಾಳೋ ಆಕೆ ಹೆಚ್ಚು ಆರೋಗ್ಯಕರವಾಗಿರುತ್ತಾಳೆ ಹಗು ಆ ಮಗು ಕೂಡ ಸಧೃಡವಾಗಿರುತ್ತದೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ನವಜಾತ ಶಿಶುವಿಗೆ ಕನಿಷ್ಟ ಮೊದಲ ಆರು ತಿಂಗಳಾದರೂ ಎದೆಹಾಲುಣಿಸುವುದು ಮಗುವಿಗೆ ಮತ್ತು ತಾಯಿಗೆ ಒಳ್ಳೆಯದು. ಆದ್ದರಿಂದ ಮಗು ಹುಟ್ಟಿದಾಗಿನಿಂದ ಸುಮಾರು 2 ವರ್ಷದ ವರೆಗೆ ಮಗುವಿಗೆ ಹಾಲುಣಿಸಿದರೆ ಉತ್ತಮ. ಸ್ತನ್ಯಪಾನವು ಮಗುವಿನ ಆರೋಗ್ಯಕರ ತೂಕ ಹೆಚ್ಚಳವನ್ನು ಉತ್ತೇಜಿಸುತ್ತದೆ.
ಆರು ತಿಂಗಳ ನಂತರ, ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಕಾಲ ಶಿಶುಗಳಿಗೆ ಸ್ತನ್ಯಪಾನ ಮಾಡುವುದನ್ನು ಮುಂದುವರಿಸಿದರೂ ತಪ್ಪೇನಿಲ್ಲ. ಇದರ ಜೊತೆ ಜೊತೆಗೆ ಘನ ಆಹಾರವನ್ನು ಸಮಯಕ್ಕೆ ಸರಿಯಾಗಿ ನೀಡಬೇಕು.
ಎಲ್ಲಕ್ಕಿಂತ ಮುಖ್ಯವಾಗಿ ಸ್ತನ್ಯಪಾನವು ಮಗು ಹಠ ಮಾಡಿದಾಗ ಅಥವಾ ತುಂಬಾ ಅಳುತ್ತಿದ್ದರೆ ಅದನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.
ಎದೆಹಾಲು ಶಿಶುಗಳ ಉಸಿರಾಟ, ಕಿವಿ, ಮೂತ್ರದ ಸೋಂಕು, ಅತಿಸಾರ, ಮಲಬದ್ಧತೆ ಮತ್ತು ಇತರ ಜಠರ ಕರುಳಿನ ಸಮಸ್ಯೆಗಳು ಸೇರಿದಂತೆ ಅನೇಕ ಕಾಯಿಲೆಗಳಿಂದ ರಕ್ಷಿಸುತ್ತದೆ.
ಯಾವ ತಾಯಿ ತನ್ನ ಮಗುವಿಗೆ ಹೆಚ್ಚು ದಿನಗಳ ಕಾಲ ಹಾಲುಣಿಸುತ್ತಾಳೋ ಆಕೆ ಹೆಚ್ಚು ಆರೋಗ್ಯಕರವಾಗಿರುತ್ತಾಳೆ ಎಂದು ವೈದ್ಯರ ಅಭಿಪ್ರಾಯವಾಗಿದೆ.