ಕೋಲಾರ : ಬಸ್ ಟಿಕೆಟ್ ತೆಗೆದುಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಕಂಡಕ್ಟರ್ ಹಾಗೂ ಹೋಂ ಗಾರ್ಡ್ ನಡುವೆ ಗಲಾಟೆ ಏರ್ಪಟ್ಟಿದೆ.ಈ ವೇಳೆ ಹೋಂ ಗಾರ್ಡ್ ಹಾಗೂ ಆತನ ಸಹೋದರ ಇಬ್ಬರು ಸೇರಿ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಅರಗ ಗ್ರಾಮದಲ್ಲಿ ನಡೆದಿದೆ.
ಟಿಕೆಟ್ ತೆಗೆದುಕೊಳ್ಳುವಂತೆ ಹೇಳಿದ್ದಕ್ಕೆ ಕಂಡಕ್ಟರ್ ನಾಗರಾಜಪ್ಪನ ಮೇಲೆ ಹಲ್ಲೆ ನಡೆಸಿದ ಹಿನ್ನಲೆ ಹೋಂಗಾರ್ಡ್ ಅನುದೀಪ್ ಹಾಗೂ ಆತನ ಸೋದರ ಪ್ರದೀಪ್ ಅವರನ್ನು ಬಂಧಿಸಿ, ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇನ್ನು ಈ ಹಲ್ಲೆಯ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.