ಬೆಂಗಳೂರು : ಬೆಂಗಳೂರಿನಲ್ಲಿ ಮೂಲಸೌಕರ್ಯ ಕಡೆಗಣನೆ ವಿಚಾರಕ್ಕೆ ಸಂಬಂಧಿಸಿದಂತೆ ಫ್ರೀಡಂ ಪಾರ್ಕ್ ನಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಡಿಕೆ ಶಿವಕುಮಾರ್ ಬೆಂಗಳೂರಿನಲ್ಲಿ ಬಲಿಷ್ಠರಾಗುತ್ತಾರೆಂದು ಸಿಎಂ ಹಣ ಕೊಡುತ್ತಿಲ್ಲ ಎಂದು ಬಿಜೆಪಿಯ ಮಾಜಿ ಸಚಿವ ಡಾ. ಅಶ್ವತ್ ನಾರಾಯಣ ಕಿಡಿ ಕಾರಿದರು.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಿಂದಲೇ ಸರ್ಕಾರದ ಗ್ಯಾರಂಟಿಗೆ ಹಣ ಬರುತ್ತಿದೆ ಆದರೆ ಕಾಂಗ್ರೆಸ್ ಬೆಂಗಳೂರಿಗೆ ಹಣ ಕೊಡುತ್ತಿಲ್ಲ ಎಂದು ಪ್ರತಿಭಟನೆಯಲ್ಲಿ ಡಾ. ಅಶ್ವತ್ ನಾರಾಯಣ ಕಿಡಿಕಾರಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬಿಜೆಪಿಯಿಂದ ರಾಜ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಬೆಂಗಳೂರು ನಗರದಲ್ಲಿ ಯಾವ ಗುತ್ತಿಗೆದಾರರು ಕೆಲಸ ಮಾಡುತ್ತಿಲ್ಲ. ಆದರಿಂದ ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಗುಂಡಿ ಬಿದ್ದಿದೆ. ಬೆಂಗಳೂರಿನ ಬಗ್ಗೆ ಕಾಂಗ್ರೆಸ್ ಗೆ ಕಾಳಜಿ ಇಲ್ಲ. ಡಿಕೆ ಶಿವಕುಮಾರ್ ಬೆಂಗಳೂರಿನಲ್ಲಿ ಬಲಿಷ್ಠರಾಗುತ್ತಾರೆ ಎಂದು ಸಿಎಂ ಹಣ ಕೊಡುತ್ತಿಲ್ಲ ಎಂದರು.
ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಜಗಳದಿಂದ ಬೆಂಗಳೂರಿನ ಜನರಿಗೆ ಅನ್ಯಾಯವಾಗುತ್ತಿದೆ.ಈ ಸರ್ಕಾರಕ್ಕೆ ಕಿಂಚಿತ್ತು ಸ್ವಾಭಿಮಾನ ಇಲ್ಲ. ಸಿಎಂ ಗೆ ಕೋಪ ಇದ್ದರೆ ಡಿಕೆ ಶಿವಕುಮಾರ್ ಮೇಲೆ ನೇರವಾಗಿ ಕೋಪ ತೀರಿಸಿಕೊಳ್ಳಲಿ.ಆದರೆ ಬೆಂಗಳೂರಿನ ಜನರ ಮೇಲೆ ಕೋಪ ತೋರಿಸಬೇಡಿ ಎಂದು ಕಾಂಗ್ರೆಸ್ ವಿರುದ್ಧ ಡಾ. ಅಶ್ವಥ್ ನಾರಾಯಣ್ ವಾಗ್ದಾಳಿ ನಡೆಸಿದರು.