ಬೆಂಗಳೂರು : ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆ ಪ್ರಕರಣವನ್ನು ಸಿಐಡಿ ಗೆ ವಹಿಸಲಾಗಿದೆ ಎಂದು ಬೆಂಗಳೂರಿನಲ್ಲಿ ಸಚಿವ ನಾಗೇಂದ್ರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಣ ಯಾವ ರೀತಿ ಗುರುಪಯೋಗ ಆಗಿದೆ. ಈ ಬಗ್ಗೆ ನಾವು ಪರಿಶೀಲನೆ ಮಾಡುತ್ತಿದ್ದೇವೆ. ನಿಗಮದ ಎಮ್ ಡಿ ಕೂಡ ದೂರು ಮಾಡಿದ್ದಾರೆ.ನಮ್ಮ ಇಲಾಖೆ ಅಧಿಕಾರಿಗಳ ಮೇಲೆ ದೂರು ದಾಖಲಾಗಿದೆ.ಎಮ್ ಡಿ ಅವರ ಸಹಿಗೆ ಕಳುಹಿಸಿದ್ದೇವೆ ಎಂದು ತಿಳಿಸಿದರು.
ಸುಮಾರು 87 ಕೋಟಿ ಬ್ಯಾಂಕ್ ನಿಂದ ಹಣ ವರ್ಗಾವಣೆ ಆಗಿದೆ ಎಂದು ತಿಳಿದು ಬಂದಿದ್ದು ಇಲ್ಲಿವರೆಗೆ 28 ಕೋಟಿ ಅಧಿಕಾರಿ ಆಗಿದ್ದು ಉಳಿದ ಹಣವನ್ನು ಇಂದು ಸಂಜೆ ಒಳಗೆ ರಿಕವರಿ ಮಾಡಲಾಗುತ್ತದೆ ಎಂದು ಎಂಡಿ ಅವರು ತಿಳಿಸಿದ್ದಾರೆ ಎಂದು ಸಚಿವ ನಾಗೇಂದ್ರ ತಿಳಿಸಿದರು.
ಸಂಜೆಯ ಒಳಗೆ ಸಂಬಂಧಪಟ್ಟ ಖಾತೆಗೆ ಹಣ ರಿಕವರಿ ಯಾಗುತ್ತದೆ ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಗೆ ಡೆಡ್ ಲೈನ್ ನೀಡಿದ್ದೇವೆ ಎಲ್ಲಾ ಹಣ ನಿಗಮದ ಖಾತೆಗೆ ವಾಪಸ್ ಬರಬೇಕು ಗಡವ ಮೀರಿದರೆ ಬ್ಯಾಂಕ್ ಅಧಿಕಾರಿಗಳ ಮೇಲು ಅಪಾಯ ದಾಖಲಾಗುತ್ತದೆ ಇಷ್ಟು ದೊಡ್ಡ ಜವಾಬ್ದಾರಿ ಸಣ್ಣಾಧಿಕಾರಿಗೆ ಹೇಗೆ ನೀಡಲಾಯಿತು ಎಂದು ಪರಿಶೀಲ ನಡೆಸಲಾಗುತ್ತದೆ ಎಂದರು.
ಇದರ ಹಿಂದೆ ಯಾರ ಕೈವಾಡ ಇದೆ ಎಷ್ಟೇ ಪ್ರಭಾವಿಗಳು ಇದ್ದರೂ ಸರ್ಕಾರ ಇವರನ್ನು ಖಂಡಿತವಾಗಿ ಬಿಡಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಬಹಳ ಗಂಭೀರವಾದ ಪ್ರಕರಣ ಎಂದು ಪರಿಗಣಿಸಿದ್ದಾರೆ ಹಾಗಾಗಿ ಯಾರನ್ನು ಪ್ರಶ್ನೆ ಇಲ್ಲ ಎಂದು ಅವರು ತಿಳಿಸಿದರು.