ಕೊಪ್ಪಳ : ಒಂದೇ ಕುಟುಂಬದ ಮೂವರು ಅನುಮಾನಾಸ್ಪದವಾಗಿ ಸಾವನನಪ್ಪಿರುವ ಘಟನೆ ಕೊಪ್ಪಳ ತಾಲೂಕಿನ ಹೊಸಲಿಂಗಪುರದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಮನೆಯಲ್ಲಿ ಅಜ್ಜಿ ಮಗಳು ಮೊಮ್ಮಗ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ರಾಜೇಶ್ವರಿ (50), ಮಗಳಾದ ವಸಂತ (28) ಮೊಮ್ಮಗ ಸಾಯಿ ಧರ್ಮತೇಜ (5) ಸಾವನ್ನಪ್ಪಿದ್ದರೆ. ಅಜ್ಜಿ ಮತ್ತು ಮೊಮ್ಮಗನ ಶವ ಬೆಡ್ರೂಮ್ ನಲ್ಲಿ ಪತ್ತೆಯಾಗಿದೆ. ಮಗಳು ವಸಂತ ಮೃತ ದೇಹ ಅಡುಗೆ ಮನೆಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಏನೋ ಸಾವಿನ ಕುರಿತು ಯಾವುದೇ ಆದಂತಹ ನಿಖರವಾದ ಕಾರಣ ತಿಳಿದು ಬಂದಿಲ್ಲ. ವಸಂತ ಗೆಲುವು ವರ್ಷಗಳ ಹಿಂದೆ ಮದುವೆಯಾಗಿದ್ದು ಗಂಡನೊಂದಿಗೆ ಜಗಳವಾಡಿ ತವರು ಮನೆಯಲ್ಲಿ ಇದ್ದಳು ಅಲ್ಲದೆ, ವಸತಿಗೆ ಬೇರೊಬ್ಬರ ಜೊತೆಗೆ ಸಂಪರ್ಕ ಇತ್ತು ಎಂದು ಹೇಳಲಾಗುತ್ತಿದ್ದು, ಈಗ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.