ಬೆಂಗಳೂರು : ಪಕ್ಕದ ತೆಲಂಗಾಣದ ರೀತಿ ರಾಜ್ಯದಲ್ಲೂ ಚಿತ್ರಮಂದಿರನಗಳನ್ನು ಬಂದ್ ಮಾಡಬೇಕೆಂಬ ಬಗ್ಗೆ ಕಳೆದ ಎರಡು ದಿನಗಳ ಹಿಂದೆ ಚಿತ್ರರಂಗದ ನಿರ್ಮಾಪಕರು ಪ್ರದರ್ಶಕರ ಸಂಘ ಫಿಲಂ ಚೇಂಬರ್ ನೇತೃತ್ವದಲ್ಲಿ ಸಭೆ ನಡೆಸಿತ್ತು. ಸ್ಯಾಂಡಲ್ ವುಡ್ ಬಂದ್ ವಿಚಾರಕ್ಕೆ ಕುರಿತಾಗಿ ನಟ ಹಾಗೂ ನಿರ್ಮಾಪಕ ಬೇಸರ ವ್ಯಕ್ತಪಡಿಸಿದ್ದು ನಾನು 10 ಸಿನಿಮಾ ಮಾಡಲು ರೆಡಿ ಇದ್ದೇನೆಬನ್ನಿ ನನ್ನ ಹತ್ತಿರ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಯಾಂಡಲ್ ವುಡ್ ಬಂದ್ ವಿಚಾರಕ್ಕೆ ರವಿಚಂದ್ರನ್ ಬೇಸರ ವ್ಯಕ್ತಪಡಿಸಿದ್ದು. ಸಮಸ್ಯೆ ಇವೆ ಅಂತ ಚಿತ್ರರಂಗ ಬಂದ್ ಮಾಡೋಕೆ ಆಗುತ್ತಾ? ನಾನು ಹತ್ತು ಸಿನಿಮಾ ಮಾಡಲು ರೆಡಿ ಇದ್ದೇನೆ. ನನ್ನತ್ರ ಬನ್ನಿ ಎಂದು ನಟ ಹಾಗೂ ನಿರ್ಮಾಪಕ ರವಿಚಂದ್ರನ್ ತಿಳಿಸಿದರು.
ದರ್ಶನ್ , ಯಶ್ ಅವರು ವರ್ಷಕ್ಕೆ ಮೂರು ಸಿನಿಮಾ ಮಾಡೋಕೆ ಆಗುತ್ತಾ? ಅವರಿಗೂ ಸ್ಟೋರಿ ಸಿಗಬೇಕು. ಅದಕ್ಕೆ ಟೈಮ್ ತೆಗೆದುಕೊಳ್ಳಬೇಕು. ಇಂಡಸ್ಟ್ರಿಯಲ್ ಏರುಪೇರು ಇದ್ದಿದ್ದೆ. ಅದು ಇಂದು ನಿನ್ನೆಯದಲ್ಲ ಅವಾಗಿನಿಂದಲೂ ಇದೆ ಎಂದು ಸ್ಯಾಂಡಲ್ ವುಡ್ ಬಂದ್ ವಿಚಾರವಾಗಿ ನಟ ರವಿಚಂದ್ರನ್ ಬೇಸರ ವ್ಯಕ್ತಪಡಿಸಿದ್ದಾರೆ.