ಬೆಂಗಳೂರು : ಕಳೆದ ವರ್ಷ ಹುಲಿ ಉಗುರು ಧರಿಸಿದ ಪ್ರಕರಣ ರಾಜ್ಯದಲ್ಲಿ ಭಾರಿ ಸದ್ದು ಮಾಡಿತ್ತು. ಬಾಲಿವುಡ್ ಹಲವು ನಟರು ಸೇರಿದಂತೆ, ಕೆಲ ರಾಜಕಾರಣಿಗಳಿಗೂ ಹುಲಿ ಉಗುರು ಪ್ರಕರಣ ಬಿಸಿ ಮುಟ್ಟಿತ್ತು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದಿಂದ ರಾಜ್ಯಕ್ಕೆ ಸುತ್ತೋಲೆ ಬಂದಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಲಿ ಉಗುರಿನ ವಿಚಾರಕ್ಕೆ ರಾಜ್ಯ ಮಟ್ಟದಲ್ಲಿ ಆದೇಶ ಹೊರಡಿಸಿದ್ದೀರಿ. ಇದು ನಿಮ್ಮ ವ್ಯಾಪ್ತಿಗೆ ಬರಲ್ಲ, ನಾವು ನಿರ್ಧಾರ ಮಾಡ್ತೀವಿ ಎಂದು ಕೇಂದ್ರ ಸರ್ಕಾರ ಹೇಳಿದೆ. ಹೀಗಾಗಿ ಕೇಂದ್ರ ಸರ್ಕಾರದ ಅಧಿಕಾರಿಗಳ ಜೊತೆ ಚರ್ಚೆ ಮಾಡ್ತೇವೆ. ನಮ್ಮ ಆದೇಶದ ಗಡುವು ಮುಗಿದಿದೆ, ಕೆಲವರು ವಾಪಸ್ ತಂದಿದ್ದಾರೆ. ಕಾನೂನು ಇಲಾಖೆ ಜೊತೆಗೆ ಚರ್ಚೆ ಮಾಡಿ ತೀರ್ಮಾನ ಮಾಡ್ತೇವೆ ಎಂದು ಬೆಂಗಳೂರಿನಲ್ಲಿ ಅರಣ್ಯ ಇಲಾಖೆಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ 10ರ ಸೀಸನ್ ಸ್ಪರ್ಧಿಯಾಗಿರುವಂತಹ ವರ್ತೂರು ಸಂತೋಷ್ ಅವರಿಗೂ ಕೂಡ ಈ ಒಂದು ಪ್ರಕರಣ ತೊಂದರೆಗೆ ಸಿಲುಕಿಸಿತ್ತು. ಒಂದು ವಾರಗಳ ಕಾಲ ಜೈಲು ವಾಸಕೂಡ ಅನುಭವಿಸಿದ್ದರು. ಅಲ್ಲದೆ ನಟ ಜಗ್ಗೇಶ ಅವರು ಕೂಡ ಹುಲಿ ಉಗುರು ಪ್ರಕರಣ ತಲೆ ಬಿಸಿ ಮಾಡಿತ್ತು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಸುತ್ತೋಲೆ ಬಂದಿದೆ.ಈ ಕುರಿತು ಚರ್ಚಿಸಿ ತೀರ್ಮಾನಿಸಲಾಗುತ್ತದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.