ಚಿಕ್ಕಮಗಳೂರು : ಇಂದು ರಾಜ್ಯದಲ್ಲಿ ದುರಂತಗಳ ಸರಮಾಲೆಯ ನಡೆದಿದೆ. ಈಗ ಚಿಕ್ಕಮಂಗಳೂರಿನಲ್ಲಿ ಒಂದು ಅನಾಹುತ ನಡೆದಿದ್ದು ಲೈನ್ ದುರಸ್ತಿ ಮಾಡುವ ವೇಳೆ ವಿದ್ಯುತ್ ಪ್ರವಹಿಸಿ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ಗಾಂಜಾಲಗೋಡು ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ.ನಿನ್ನೆ ಸುರಿದ ಗಾಳಿ ಮಳೆಯಿಂದ ವೈರು ಒಂದು ನೇತಾಡುತ್ತಿತ್ತು.ಈ ವಳೆ ಯುವಕ ಲೈನ್ ದುರಸ್ತಿ ಮಾಡುವಾಗ ವಿದ್ಯುತ್ ಪ್ರವಹಿಸಿ ಯುವಕ ಜೀವಿತ್ (23) ಸಾವನ್ನಪ್ಪಿದ್ದಾನೆ. ಎಂದು ತಿಳಿದುಬಂದಿದೆ. ಚಿಕ್ಕಮಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.