ಬೆಂಗಳೂರು : ಇತ್ತೀಚಿಗೆ ತಂದೆಯಾದ ಕಾರ್ ಪಡೆಯುತ್ತಿದ್ದಾಗ ಎಕ್ಸೆಲೆಟರ್ ತುಳಿದು, ನಾಲ್ಕು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಮಹಾ ಸೋಮಣ್ಣವೆ ಮತ್ತೊಂದು ಘಟನೆ ನಡೆದಿದ್ದು ನೀರಿನ ಸಂಪ್ ನಲ್ಲಿ ಐದು ವರ್ಷದ ಮಗು ಬಿದ್ದು ಸಾವನಪ್ಪಿರುವ ಘಟನೆ ಇದೀಗ ಬೆಂಗಳೂರಿನ ಕೆ ಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೌದು ಸಂಪಿಗೆ ಬಿದ್ದು 5 ವರ್ಷದ ಮಗು ಸಾವನನಪ್ಪಿರುವ ಘಟನೆ ನಡೆದಿದೆ. ನೇಪಾಳ ಮೂಲದ ದಂಪತಿಯ ಪುತ್ರ ಸಬೀನ್ (5) ಸಾವನ್ನಪ್ಪಿರುವ ಮಗು ಎಂದು ತಿಳಿಬಂದಿದೆ. ಬೆಂಗಳೂರಿನಲ್ಲಿ ನೇಪಾಳ ಮೂಲದ ದಂಪತಿ ಕೂಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಮಗುವನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ. ಕೆ ಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಹಲ್ಲೆಯ ಯತ್ನ
ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಯಾದಗಿರಿ ತಾಲೂಕಿನ ಅಬ್ಬೆ ತುಮಕೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಲ್ಲು ಎತ್ತಿ ಹಾಕಿ ಸಿದ್ದಪ್ಪ(45) ಎಂಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಲಾಗಿದೆ. ಗಾಯಾಳುವನ್ನು ಕುಟುಂಬದವರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದಕ್ಕೆ ಕುಟುಂಬದವರು ಆಕ್ರೋಶ ಹೊರಹಾಕಿದ್ದಾರೆ. ವಿಜಯಪುರ ಜಿಲ್ಲಾಸ್ಪತ್ರೆ ವಿರುದ್ಧ ಜನರ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಯಾದಗಿರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.