ದಕ್ಷಿಣಕನ್ನಡ : ಪ್ರತಿವರ್ಷ ನಡೆಯುವ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತರ ಕರ್ನಾಟಕದ ಭಾಗದ ಎಲ್ಲಾ ವಿದ್ಯಾರ್ಥಿಗಳು ಮಾಸ್ ಕಾಪಿ ಮಾಡುತ್ತಿದ್ದರು ಎಂದು ಎಂಎಲ್ಸಿ ಬೋಜೆ ಗೌಡ ಗಂಭೀರವಾದಂತ ಆರೋಪವನ್ನು ಮಾಡಿದ್ದಾರೆ.
ಮಂಗಳೂರಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಇದು ವಿದ್ಯಾರ್ಥಿಗಳ ಭವಿಷ್ಯದ ವಿದ್ಯಾಭ್ಯಾಸಕ್ಕೆ ಮಾರಕವಾಗುತ್ತಿತ್ತು. ಈ ಹಿನ್ನಲೆ ನೈರುತ್ಯ ಕ್ಷೇತ್ರಗಳಿಗೆ ಪರೀಕ್ಷೆ ಸಮಯ ಅನ್ಯಾಯ ಆಗುತ್ತಿರುವ ಬಗ್ಗೆ ವಿಧಾನ ಪರಿಷತ್ನಲ್ಲಿ ಹೇಳಿದ್ದೆ. ಜೊತೆಗೆ ಪರೀಕ್ಷೆ ವೇಳೆ ಸಿಸಿಟಿವಿ ಅಳವಡಿಕೆ ಕುರಿತು ಪರಿಷತ್ನಲ್ಲಿ ಆಗ್ರಹಿಸಿದ್ದೆ ಎಂದರು.
ಉತ್ತರ ಕರ್ನಾಟಕ ಭಾಗದಲ್ಲಿ ಮಾಸ್ ಕಾಪಿ ಆಗ್ತಿತ್ತು. ಪರೀಕ್ಷೆ ವೇಳೆ ಸಿಸಿಟಿವಿ ಅಳವಡಿಕೆ ಬಗ್ಗೆ ನಾನು ಪರಿಷತ್ ನಲ್ಲಿ ಆಗ್ರಹಿಸಿದ್ದೆ. ಆಗ ಆ ಭಾಗದಲ್ಲಿ ಮಾಸ್ ಕಾಪಿ ಆಗ್ತಾ ಇತ್ತು. ಅದನ್ನು ತಡೆದು ಮಾಸ್ ಕಾಪಿ ನಿಲ್ಲಿಸಲು ಕ್ಯಾಮಾರ ಹಾಕಲು ಹೇಳಿದ್ದೆ. ನಿಜವಾದ ಶಿಕ್ಷಣ ಸಿಗಬೇಕು ಅಂತ ಪರಿಷತ್ ನಲ್ಲಿ ಆಗ್ರಹಿಸಿದ್ದೆ. ಬಹಳ ಹಿಂದಿನಿಂದಲೂ ಅನ್ಯಾಯ ಆಗ್ತಾ ಇದೆ ಎಂದು ಹೋರಾಟ ಮಾಡಿದ್ದೆ. ಅದರ ಪರಿಣಾಮ ಈ ಬಾರಿ ಪರೀಕ್ಷೆಯಲ್ಲಿ ಸಿಸಿಟಿವಿ ಹಾಕಿದ್ದಾರೆ ಎಂದು ತಿಳಿಸಿದರು.
ಇದರ ಪರಿಣಾಮವಾಗಿ ಈ ಬಾರಿ ಸರಿಯಾಗಿ ಪರೀಕ್ಷೆ ನಡೆದು ಫಲಿತಾಂಶ ಬಂದಿದೆ. ಈಗ ನಾವು ಮತ್ತೆ ಅದರ ಬಗ್ಗೆ ಧ್ವನಿ ಎತ್ತಬೇಕಿದೆ. ಈ ಹಿಂದಿನ ಅನಾಹುತದ ತಪ್ಪಿತಸ್ಥರ ಮೇಲೆ ಕ್ರಮ ಆಗಬೇಕು. ಈಗಿನ ರಿಸಲ್ಟ್ ನೋಡಿಯಾದ್ರೂ ಹಿಂದಿನ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಈ ಬಗ್ಗೆ ನಾನು ಮುಂದೆ ಪರಿಷತ್ ನಲ್ಲಿ ಆಗ್ರಹ ಮಾಡ್ತೇನೆ ಎಂದು ತಿಳಿಸಿದರು.