ಬೆಂಗಳೂರು : ಈಗಾಗಲೇ ದೇಶದಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಪ್ರಕ್ರಿಯೆ ಬಹುತೇಕ ಮುಗಿದಿದೆ ನಾಲ್ಕರಂದು ಫಲಿತಾಂಶ ಹೊರಬೀಳಲಿದೆ. ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿ ಆದರೆ ಕಾಂಗ್ರೆಸ್ ಗಂಟು ಮೂಟೆ ಕಟ್ಟುವುದು ಒಂದೇ ಬಾಕಿ ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಬೀಳಿಸಲು ಕಾಂಗ್ರೆಸ್ ನವರೇ ಸಾಕು. ಬೇರೆಯವರು ಬೇಡ 17 ಜನ ಹೋದಾಗ ಇವರ್ಯಾಕೆ ಮುಟ್ಟಿ ನೋಡಿಕೊಳ್ಳಲಿಲ್ಲ? ಕೈ ಶಾಸಕರೇ ಯಾಕಾದರೂ ಗೆಲ್ಲಿಸಿದ್ದೀವಿ ಅಂತ ಬೇಸರದಲ್ಲಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಹಗಲುಗನಸು ಕಾಣುತ್ತಿದ್ದಾರೆ. ಮೋದಿ ಮತ್ತೆ ಪ್ರಧಾನಿ ಆದಮೇಲೆ ಕಾಂಗ್ರೆಸ್ ಗಂಟು ಮೂಟೆ ಕಟ್ಟೋದು ಒಂದೇ ಬಾಕಿ ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದರು.
ಇನ್ನು ಹಾಸನದಲ್ಲಿ SIT ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಕಾಂಗ್ರೆಸ್ಸಿಗರಿಗೆ ಇರಿ ಮುರಿಸು ಆಗಿ ಹೀಗೆ ಮಾಡಿದ್ದಾರೆ. ಒಕ್ಕಲಿಗ ಸಮುದಾಯ ತಿರುಗಿ ಬೀಳುತ್ತೆ ಎಂದು ಅವರಿಗೆ ಭಯ ಶುರುವಾಗಿದೆ ಚಾಲಕನಿಗೆ ಜಾಮೀನು ನಿರಾಕರಿಸಿದರು ಏಕೆ ಬಂಧಿಸಿಲ್ಲ ಅವರಿಗೆ ಯಾರ್ಯಾರು ಬೇಕು, ಯಾರ್ಯಾರ ಮೇಲೆ ಆರೋಪ ಹರಿಸಬೇಕು ಯಾರನ್ನ ವರ್ಗಾವಣೆ ಮಾಡಬೇಕು ಅದಕ್ಕೆ ಎಸ್ಐಟಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.