ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗೋ ವಿಶ್ವಾಸ ಹೊಂದಿದ್ದಾರೆ. ಇದೇ ಕಾರಣಕ್ಕಾಗಿ ತಮ್ಮ ಮುಂದಿನ ಸರ್ಕಾರದ 100 ದಿನಗಳ ಕಾರ್ಯಸೂಚಿಯನ್ನು ರಚಿಸಲು 10 ಸಮಿತಿಗಳನ್ನು ನಮೋ ರಚಿಸಿದ್ದಾರೆ.
ದೇಶದಲ್ಲಿ ಇದೀಗ ಲೋಕಸಭಾ ಚುನಾವಣೆ ನಡೆಯುತ್ತಿದೆ. ಏತನ್ಮಧ್ಯೆ, ನಾಲ್ಕನೇ ಹಂತದ ಮತದಾನವು ಮೇ 13 ರ ಸೋಮವಾರ ನಡೆಯಲಿದೆ. ಲೋಕಸಭಾ ಚುನಾವಣೆಯ ಫಲಿತಾಂಶಕ್ಕೂ ಮುನ್ನವೇ ಪ್ರಧಾನಿ ಮೋದಿ ಮೂರನೇ ಅವಧಿಗೆ ತಯಾರಿ ಆರಂಭಿಸಿದ್ದಾರೆ.
ಮುಂದಿನ 100 ದಿನಗಳ ಸರ್ಕಾರದ ಕಾರ್ಯಸೂಚಿಯನ್ನು ಜೂನ್ 4 ರಂದು ಫಲಿತಾಂಶಗಳು ಹೊರಬಂದ ಕೂಡಲೇ ಮಂತ್ರಿಮಂಡಲದ ಮೊದಲ ಸಭೆಯಲ್ಲಿ ಜಾರಿಗೆ ತರಲಾಗುವುದು.
ಮೋದಿ ಪ್ರಸ್ತುತ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಆದರೆ ಅವರು ತಮ್ಮ ಸರ್ಕಾರದ 100 ದಿನಗಳ ಕಾರ್ಯಸೂಚಿಯನ್ನು ಕಾರ್ಯಗತಗೊಳಿಸಲು ತಮ್ಮ ಉನ್ನತ ಕಾರ್ಯದರ್ಶಿಗಳ 10 ಸಮಿತಿಗಳನ್ನು ನೇಮಿಸಿದ್ದಾರೆ. ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಕೆಲಸದ ಕಾರ್ಯಸೂಚಿಯನ್ನು ಅಂತಿಮಗೊಳಿಸಲು ಕಾರ್ಯದರ್ಶಿಗಳ 10 ಗುಂಪುಗಳನ್ನು ರಚಿಸಲಾಗಿದೆ ಎಂದು ಸರ್ಕಾರಿ ಮೂಲಗಳು ಇಂಡಿಯಾ ಟುಡೇಗೆ ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ತಮ್ಮ ಚುನಾವಣಾ ಭಾಷಣಗಳಲ್ಲಿ ಇದನ್ನು ಉಲ್ಲೇಖಿಸಿದ್ದಾರೆ.
“ಜೂನ್ 4 ರಂದು ಚುನಾವಣಾ ಫಲಿತಾಂಶಗಳು ಹೊರಬಂದ ನಂತರ ಹೊಸ ಸರ್ಕಾರ ರಚನೆಯಾದ ಕೂಡಲೇ ಮಂತ್ರಿಮಂಡಲದ ಮೊದಲ ಸಭೆಯಲ್ಲಿ ಸರ್ಕಾರವು 100 ದಿನಗಳ ಕಾರ್ಯಸೂಚಿಯನ್ನು ಚರ್ಚಿಸುವ ನಿರೀಕ್ಷೆಯಿದೆ” ಎಂದು ಮೂಲಗಳು ತಿಳಿಸಿವೆ. ಈ ಗುಂಪುಗಳಲ್ಲಿ ಗೃಹ, ಹಣಕಾಸು, ರಕ್ಷಣಾ ಸಚಿವಾಲಯಗಳು ಸೇರಿವೆ ಎಂದು ಅವರು ಹೇಳಿದರು.
ಅರವಿಂದ ಕೇಜ್ರಿವಾಲ್ಗೆ ಹುಚ್ಚು, ಬಿಜೆಪಿಯಲ್ಲಿ ವಯಸ್ಸಿನ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ: ಆರ್.ಅಶೋಕ್
ದೇಶದಲ್ಲಿ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ ಮೈತ್ರಿಕೂಟ’ ಅಧಿಕಾರಕ್ಕೆ: ಡಿಸಿಎಂ ಡಿ.ಕೆ. ಶಿವಕುಮಾರ್