ಬೆಳಗಾವಿ : ಕಳೆದ ಕೆಲವು ತಿಂಗಳುಗಳ ಹಿಂದೆ ಹುಬ್ಬಳ್ಳಿಯಲ್ಲಿ ಮರ್ಯಾದ ಹತ್ಯೆ ಪ್ರಕರಣ ಭಾರಿ ಸದ್ದು ಮಾಡಿತ್ತು. ಅದರ ಬೆನ್ನಲ್ಲೆ, ರಾಜ್ಯ ಸರ್ಕಾರ ಮರ್ಯಾದ ಹತ್ಯೆ ತಡೆ ಕಾನೂನು ಜಾರಿ ಮಾಡಿದ್ದು, ಇದೀಗ ರಾಜ್ಯದಲ್ಲಿ ಮತ್ತೊಂದು ಮರ್ಯಾದ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.
ಹೌದು ಪ್ರಿಯಕರನ ಜೊತೆಗೆ ಯುವತಿ ಓಡಿ ಹೋಗಿದ್ದಕ್ಕೆ ವಿಷ ಹಾಕಿ ಕೊಂದ ಬಳಿಕ ಯುವತಿಯ ಸಂಬಂಧಿಕರೇ ಆಕೆಯ ಶವ ಸುಟ್ಟು ಹಾಕಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಸೌದತ್ತಿ ತಾಲೂಕಿನಲ್ಲಿ ಫೆಬ್ರವರಿ 17ರಂದು ಪ್ರಿಯಕರ ಕೃಷ್ಣನ ಜೊತೆಗೆ ಸತ್ತ್ಯವ್ವ ಓಡಿ ಹೋಗಿದ್ದಳು. ಸೌದತ್ತಿ ತಾಲೂಕಿನ ಬೆಳವಡಿಯಲ್ಲಿ ಬಾಡಿಗೆ ಮನೆಯಲ್ಲಿ ಇಬ್ಬರು ವಾಸಿಸುತ್ತಿದ್ದರು.
15 ದಿನಗಳ ಬಳಿಕ ಇಬ್ಬರನ್ನು ಕುಟುಂಬದ ಸದಸ್ಯರು ಕರೆ ತಂದಿದ್ದಾರೆ. ಎರಡು ಕುಟುಂಬಸ್ಥರ ನಡುವೆ ರಾಜಿ ಸಂಧಾನ ನಡೆದು ಕರೆತಂದಿದ್ದರು. ಬಳಿಕ ಸತ್ಯವ್ವಳ ಅಣ್ಣ ಆಕೆಯನ್ನು ಕರೆದುಕೊಂಡು ಬಂದು ಅಕ್ಕನ ಮನೆಗೆ ಕಳುಹಿಸಿದ್ದ. ಮಹಾರಾಷ್ಟ್ರದ ಶಿರೋಳದಲ್ಲಿ ಸತ್ಯವ ಅಕ್ಕನ ಮನೆಗೆ ಕಳುಹಿಸಿದ್ದಾರೆ. ಈ ವೇಳೆ ಕೃಷ್ಣ ಪಾಟೀಲ್ ಮರೆತು ಬಿಡುವಂತೆ ಸತ್ಯವ್ವಳಿಗೆ ಒತ್ತಡ ಹೇರಿದ್ದಾರೆ.
ಇದಕ್ಕೆ ಒಪ್ಪದಿದ್ದಾಗ ಅರಗ ಗ್ರಾಮಕ್ಕೆ ಕರೆದುಕೊಂಡು ಬಂದು ಕೊಲೆ ಮಾಡಿದ್ದಾರೆ. ಮಾರ್ಚ್ 21ರಂದು ವಿಷ ಕುಡಿಸಿ ಸತ್ಯವ್ವ ಕೊಲೆಗೊಯ್ದು ದೇಹವನ್ನು ಸುಟ್ಟು ಹಾಕಿದ್ದಾರೆ. ಸತ್ಯವ ಅಣ್ಣ ಶಾನುರ ಚಿಕ್ಕಪ್ಪ ಪ್ರಕಾಶ ಭಾವ ಕಲ್ಲಪ್ಪನಿಂದ ಈ ಒಂದು ಕೃತ್ಯ ನಡೆದಿದ್ದು ಬಳಿಕ ಗ್ರಾಮದ ಸ್ಮಶಾನದಲ್ಲಿ ಶವವನ್ನು ಸುಟ್ಟು ಹಾಕಿದ್ದಾರೆ. ಸಾಕ್ಷಿ ನಾಶಕ್ಕಾಗಿ ಆಕೆಯ ಹಾಸಿಗೆ ಬಟ್ಟೆ ಸಮೇತ ಶವವನ್ನು ಸುಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿಯೇ ಶವ ಸುಟ್ಟು ಮೂವರು ವಾಪಸ್ ಊರಿಗೆ ಬಂದಿದ್ದಾರೆ.
ಸತ್ಯವ ಸಂಪರ್ಕಕ್ಕೆ ಸಿಗದಿದ್ದಾಗ ಪ್ರಿಯಕರ ಕೃಷ್ಣ ಸಂಶಯ ಗೊಂಡಿದ್ದಾನೆ. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಕೃಷ್ಣ ದೂರು ನೀಡಿದ್ದಾನೆ. ಕೃಷ್ಣನ ದೂರಿನ ಅನ್ವಯ ಸಿಪಿಐ ಜಾವೇದ್ ಮುಶಪೂರಿ ತನಿಖೆ ಕೈಗೊಂಡಿದ್ದಾರೆ ಸತ್ತ್ಯವ್ವ ಶಾನೂರನ್ನು ಕರೆದುಕೊಂಡು ಬಂದು ವಿಚಾರ ನಡೆಸಿದ್ದಾರೆ.ತಂಗಿ ಮರ್ಯಾದೆ ತೆಗೆಯುವ ಕೆಲಸ ಮಾಡಿದ್ದಕ್ಕೆ ಕೊಲೆ ಮಾಡಿದ್ದೇವೆ ಎಂದು ವಿಚಾರಣೆಯ ವೇಳೆ ಸತ್ಯವ ಕೊಲೆ ಮಾಡಿದ್ದಾಗಿ ಆಕೆಯ ಅಣ್ಣ ತಪ್ಪು ಒಪ್ಪಿಕೊಂಡಿದ್ದಾನೆ. ಘಟನೆ ಸಂಭಂದ ಶಾನೂರ ಪ್ರಕಾಶ ಮತ್ತು ಕಲ್ಲಪ್ಪನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.








