ಕಲಬುರಗಿ : ಕೌಟುಂಬಿಕ ಕಲಹದಿಂದ ಅಪ್ರಾಪ್ತೆ ಬಾಲಕಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಕಲಬುರ್ಗಿಯ ಉಪನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಹಿನ್ನೆಲೆಯಲ್ಲಿ 9 ಜನರ ವಿರುದ್ಧ ಇದೀಗ ದೂರು ದಾಖಲಾಗಿದೆ.
ಕಲಬುರ್ಗಿ ನಗರದಲ್ಲಿ ಬಾಲಕಿಯ ಕುಟುಂಬ ವಾಸವಿತ್ತು. ಕೂಲಿ ಕೆಲಸ ಮಾಡಿಕೊಂಡು ಬಾಲಿಕೆಯ ಕುಟುಂಬ ವಾಸಿಸುತ್ತಿದ್ದರು. ಬಾಲಕಿ ಸಂಬಂಧಿಕರ ಜೊತೆಗೆ ಕೌಟುಂಬಿಕ ಕಲಹವಿತ್ತು. ಈ ಸೇಡಿಗೆ ಬಾಲಕಿಯನ್ನು ಬೈಕ್ನಲ್ಲಿ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.
ಅಪ್ರಾಪ್ತೆ ಬಾಲಕಿಯ ಮೇಲೆ ಸಂಬಂಧಿಕರು ಹಲ್ಲೆ ಮಾಡಿದ್ದಾರೆ. ಇದೀಗ ಅಲ್ಲಿಗೆ ಒಳಗಾದಂತಹ ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮರಲಿಂಗಪ್ಪ ಚತ್ತರಕಿ, ಈರಪ್ಪ ಚತ್ತರಕಿ, ಬಸಪ್ಪ ಚತ್ತರಕಿ ಸೇರಿ ಹಲ್ಲೆ ಮಾಡಿದ 9 ಜನರ ವಿರುದ್ಧ ಇದೀಗ ದೂರು ದಾಖಲಾಗಿದೆ ಐಪಿಸಿ ಸೆಕ್ಷನ್ 109, 354, 364, 307ರ ಅಡಿ ದೂರು ದಾಖಲಾಗಿದೆ.