ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಚುನಾವಣಾ ಸಮಾವೇಶದಲ್ಲಿ ಭಾಗಿಯಾಗಿದ್ದಂತ ವ್ಯಕ್ತಿಯೊಬ್ಬರು ನಿಶ್ಯಕ್ತಿಯಿಂದ ಸಾವನ್ನಪ್ಪಿರೋ ಘಟನೆ ನಡೆದಿದೆ.
ಬಾಗಲಕೋಟೆಯಲ್ಲಿ ಏಪ್ರಿಲ್.29ರಂದು ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭಾ ಚುನಾವಣೆ ಸಂಬಂಧ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ್ದರು. ಈ ಕಾರ್ಯಕ್ರಮದಲ್ಲಿ ಮೋದಿಯವರ ಅಭಿಮಾನಿಯಾಗಿದ್ದಂತ ಶ್ರೀಶೈಲ ದೇಸಾಯಿ(45) ಎಂಬುವರು ಭಾಗಿಯಾಗಿದ್ದರು.
ಮೊದಲೇ ಅನಾರೋಗ್ಯದಿಂದ ಬಳಲುತ್ತಿದ್ದಂತ ಅವರು, ಅದರ ನಡುವೆಯೂ ತಮ್ಮ ಊರಿನಿಂದ ಬಂದಿದ್ದಂತ ವಾಹನದಲ್ಲಿ ಬಾಗಲಕೋಟೆಯ ಮೋದಿ ಸಮಾವೇಶಕ್ಕೆ ಆಗಮಿಸಿದ್ದರು.
ಮೋದಿಯವರ ಕಾರ್ಯಕ್ರಮದ ನಂತ್ರ ಊರಿನವರ ಜೊತೆಗೆ ಬಂದಿದ್ದಂತ ಅವರು, ಅವರಿಂದ ತಪ್ಪಿಸಿಕೊಂಡಿದ್ದರು. ಅವರನ್ನು ಹುಡುಕಾಡಿದಂತ ಊರಿನವರು ಸಿಗದೇ ಇದ್ದಾಗ, ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಹೆಬ್ಬಾಳ ಗ್ರಾಮಕ್ಕೆ ತೆರಳಿದ್ದರು. ತಮ್ಮೂರಿನವರನ್ನು ಹುಡುಕಿ ಹುಡುಕಿ ಸಾಕಾಗಿ, ನಿಶ್ಯಕ್ತಿಯಿಂದ ಸಾವನ್ನಪ್ಪಿದ್ದಾರೆ.
ನಿನ್ನೆ ರಾತ್ರಿ ಶ್ರೀಶೈಲ ದೇಸಾಯಿ ಅವರ ಮೃತದೇಹ ಪತ್ತೆಯಾಗಿದ್ದು, ಮೃತದೇಹವನ್ನು ಹಂದಿಗಳು ತಿಂದು ಎಳೆದಾಡಿದ್ದಾವೆ. ಈ ಸಂಬಂಧ ಬಾಗಲಕೋಟೆ ನವನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BIG NEWS: ನಮಗೆ ತೊಂದ್ರೆ ಕೊಟ್ರೆ ‘ಸೂಸೈಡ್’ ಮಾಡಿಕೊಳ್ತೀವಿ: SIT ಮುಂದೆ ಹೇಳಿಕೆಗೆ ‘ಸಂತ್ರಸ್ತೆ’ಯರು ಹಿಂದೇಟು
BREAKING: ಅಶ್ಲೀಲ ವೀಡಿಯೋ ಕೇಸ್: SIT ವಿಚಾರಣೆಗೆ ಹಾಜರಾಗಲು 7 ದಿನ ಅವಕಾಶ ನೀಡಿ– ಪ್ರಜ್ವಲ್ ರೇವಣ್ಣ ಮನವಿ