ಬೆಂಗಳೂರು : ಬರದಿಂದ ತತ್ತರಿಸಿರು ಜನತೆಗೆ ಶಾಕಿಂಗ್ ನ್ಯೂಸ್, ರಾಜ್ಯದ ಡ್ಯಾಂಗಳಲ್ಲಿ ಸದ್ಯಕ್ಕೆ ಕೇವಲ ಶೇ. 10.83 ರಷ್ಟು ಮಾತ್ರ ನೀರು ಇದೆ ಎಂದು ವರದಿಯಾಗಿದೆ.
ರಾಜ್ಯದಲ್ಲಿ 22 ಜಲಾಶಯಗಳಲ್ಲಿ ಸದ್ಯ ಡೆಡ್ ಸ್ಟೋರೇಜ್ ಹೊರತುಪಡಿಸಿ 57.62 ಟಿಎಂಸಿ ನೀರು ಮಾತ್ರ ಉಳಿದಿದ್ದು, ಅದರಲ್ಲಿ ಕೃಷ್ಣಾಕೊಳ್ಳದ ಜಲಾಶಯಗಳಲ್ಲಿಯೇ 49.19 ಟಿಎಂಸಿ ನೀರು ಶೇಖರಣೆಯಾಗಿದೆ.
ರಾಜ್ಯದಲ್ಲಿ ಮಳೆ ಕೊರತೆ, ಬಿಸಿಲಿನ ಪ್ರಮಾಣ ಹೆಚ್ಚಳದಿಂದಾಗಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ಭಾರಿ ಪ್ರಮಾಣದಲ್ಲಿ ಕುಸಿತವಾಗಿದೆ. ಸಕಾಲದಲ್ಲಿ ಮಳೆಯಾಗದಿದ್ದರೆ ರಾಜ್ಯದ ನೀರಿನ ಸಮಸ್ಯೆ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ.