Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೆಂಗಳೂರಲ್ಲಿ ಕಸದ ಹೆಸರಿನಲ್ಲಿ 36 ಸಾವಿರ ಕೋಟಿ ಲೂಟಿ : ಆರ್.ಅಶೋಕ್ ಗಂಭೀರ ಆರೋಪ!

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: ಐವರು IAS ಅಧಿಕಾರಿಗಳ ವರ್ಗಾವಣೆ | IAS Officer Transfer

BIG NEWS : ಭಾರತದ ರಾಜಕೀಯ ಇತಿಹಾಸದಲ್ಲಿ ‘ನೆಹರೂ ದಾಖಲೆ’ ಮುರಿದ ಮೋದಿ : ನಿರಂತರ 4,399 ದಿನಗಳ ಕಾಲ ‘ಪ್ರಧಾನಿ’ಯಾಗಿ ಸೇವೆ | PM Modi

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ ‘ಹಿಂದೂ’ಗಳನ್ನು ‘ತೃತೀಯ ದರ್ಜೆ ನಾಗರೀಕರ’ನ್ನಾಗಿ ನೋಡುವ ಕೆಟ್ಟ ವಾತಾವಣವಿದೆ- ಡಿವಿ ಸದಾನಂದಗೌಡ
KARNATAKA

ರಾಜ್ಯದಲ್ಲಿ ‘ಹಿಂದೂ’ಗಳನ್ನು ‘ತೃತೀಯ ದರ್ಜೆ ನಾಗರೀಕರ’ನ್ನಾಗಿ ನೋಡುವ ಕೆಟ್ಟ ವಾತಾವಣವಿದೆ- ಡಿವಿ ಸದಾನಂದಗೌಡ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಸಿದ್ದರಾಮಯ್ಯನವರ ಸರಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಹಿಂದೂಗಳನ್ನು ದ್ವಿತೀಯ ದರ್ಜೆಯಲ್ಲ; ತೃತೀಯ ದರ್ಜೆಯ ನಾಗರಿಕರನ್ನಾಗಿ ನೋಡುವ ಕೆಟ್ಟ ವಾತಾವರಣ ನಿರ್ಮಾಣ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಆರೋಪಿಸಿದರು.

ನಗರದ ಹೋಟೆಲ್ ಜಿ.ಎಂ. ರಿಜಾಯ್ಸ್‍ನ ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮುಸ್ಲಿಂ ಭಯೋತ್ಪಾದಕರಿಗೆ, ಮತಾಂಧರಿಗೆ ಎಲ್ಲ ರೀತಿಯ ರಕ್ಷಣೆ ಕೊಡುತ್ತಿದ್ದಾರೆ. ಚುನಾವಣೆಗೆ ಮುಸ್ಲಿಂ ಭಯೋತ್ಪಾದಕರನ್ನು ಅವರ ಒಂದು ಕಾರ್ಯತಂತ್ರವಾಗಿ ರೂಪೀಕರಣ ಮಾಡುತ್ತಿದ್ದಾರೆ. ಕುಕ್ಕರ್ ಬಾಂಬ್ ಸ್ಫೋಟದಿಂದ ಆರಂಭಿಸಿ ಬಾಂಬ್ ಬ್ಲಾಸ್ಟ್ ಪ್ರಕರಣದ ವರೆಗೆ ಬರಿಯ ಮುಸಲ್ಮಾನ ಭಯೋತ್ಪಾದಕರೇ, ಮುಸಲ್ಮಾನ ಗೂಂಡಾಗಳೇ ಕಾಂಗ್ರೆಸ್ ಪರವಾಗಿ ನಿಂತಿದ್ದಾರೆ. ಅವರ ಪರವಾಗಿ ಕಾಂಗ್ರೆಸ್ಸಿನ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ನಿಲ್ಲುತ್ತಿದ್ದು, ಇದೆಂಥ ವಿಪರ್ಯಾಸ ಎಂದು ಪ್ರಶ್ನಿಸಿದರು.

ಕರ್ನಾಟಕ ರಾಜ್ಯವು ಒಂದು ಕಾಲಘಟ್ಟದಲ್ಲಿ ಎಲ್ಲರನ್ನೂ ಸಮಾನತೆಯಿಂದ ನೋಡಿದೆ. ಆ ವಿಶ್ವಮಾನವನ ಸಂದೇಶವನ್ನು ನೀಡಿದ ನಾಡು ಕರ್ನಾಟಕ. ಈ ಚುನಾವಣೆ ನಡೆಸುವುದೇ ಗೂಂಡಾಗಳ ಮುಖಾಂತರ ಎಂಬಂತೆ ಕರ್ನಾಟಕವನ್ನು ಬದಲಿಸಿದಂತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಗೂಂಡಾಗಿರಿ, ಬೆದರಿಕೆ ತಂತ್ರ, ಹಿಂದೂಗಳ್ಯಾರೂ ಮನೆಯಿಂದ ಹೊರಕ್ಕೆ ಬರಬಾರದು, ಮತ ಹಾಕಲು ಬರಬಾರದು ಎಂಬ ಭಯದ ವಾತಾವರಣದ ಮೂಲಕ ಚುನಾವಣೆ ನಡೆಸುವ ಕಾಂಗ್ರೆಸ್ಸಿನವರ ಹುನ್ನಾರಕ್ಕೆ ಜನರು ತಕ್ಕ ಉತ್ತರ ಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಸಿದ್ದರಾಮಯ್ಯನವರು ಮುಂದುವರೆದರೆ ಹಿಂದೂಗಳಿಗೆ ರಕ್ಷಣೆ ಇಲ್ಲದ ಪರಿಸ್ಥಿತಿ ಉದ್ಭವಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಜನರು ಆಲೋಚಿಸಿ ಮೋದಿಯವರ ಪರ ಮತದಾನ ಮಾಡಲಿದ್ದಾರೆ ಎಂದು ನುಡಿದರು.

ಒಂದು ವಿಶೇಷ ಕಾಲಘಟ್ಟದಲ್ಲಿ ನಾವಿದ್ದೇವೆ. ಕರ್ನಾಟಕದ ಈ ಬಾರಿಯ ಚುನಾವಣೆ ಒಂದು ರೀತಿಯಲ್ಲಿ ಭಯೋತ್ಪಾದಕರ ವಿರುದ್ಧ ಮತ್ತು ಹಿಂದೂ ಧಾರ್ಮಿಕ ವಿಚಾರ, ವಿಧಿವಿಧಾನಗಳನ್ನು ಅನುಷ್ಠಾನ ಮಾಡುವ ಪ್ರಾಮಾಣಿಕ ಮತ್ತು ಸಾಮಾನ್ಯ ಕಾರ್ಯಕರ್ತರ ವಿರುದ್ಧದ ಹೋರಾಟದಂತಿದೆ ಎಂದು ವಿಶ್ಲೇಷಿಸಿದರು.

ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಈ ಸಂದರ್ಭದಲ್ಲಿ ಇದ್ದರು.

ಸಿದ್ಧರಾಮಯ್ಯ ಸರ್ಕಾರದಲ್ಲಿ ಕನ್ನಡಿಗರು ಬದುಕಿನ ಗ್ಯಾರಂಟಿಯನ್ನೇ ಕಳೆದುಕೊಂಡಿದ್ದಾರೆ- ಬಿಎಸ್ ಯಡಿಯೂರಪ್ಪ ವಾಗ್ಧಾಳಿ

ಕರ್ನಾಟಕಕ್ಕೆ ಪ್ರಧಾನಿ ಮೋದಿ ಚೊಂಬು ಕೊಟ್ಟಿದ್ದಾರೆ: ಕೇಂದ್ರ ಸರ್ಕಾರದ ವಿರುದ್ದ ಸಿಎಂ ಸಿದ್ದರಾಮಯ್ಯ ವಾಗ್ದಾಳಿ!

Share. Facebook Twitter LinkedIn WhatsApp Email

Related Posts

BREAKING : ಬೆಂಗಳೂರಲ್ಲಿ ಕಸದ ಹೆಸರಿನಲ್ಲಿ 36 ಸಾವಿರ ಕೋಟಿ ಲೂಟಿ : ಆರ್.ಅಶೋಕ್ ಗಂಭೀರ ಆರೋಪ!

1 Min Read

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: ಐವರು IAS ಅಧಿಕಾರಿಗಳ ವರ್ಗಾವಣೆ | IAS Officer Transfer

2 Mins Read

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 5 ಮಂದಿ `IAS’ ಅಧಿಕಾರಿಗಳ ವರ್ಗಾವಣೆ | IAS Officer Transfer

1 Min Read
Recent News

BREAKING : ಬೆಂಗಳೂರಲ್ಲಿ ಕಸದ ಹೆಸರಿನಲ್ಲಿ 36 ಸಾವಿರ ಕೋಟಿ ಲೂಟಿ : ಆರ್.ಅಶೋಕ್ ಗಂಭೀರ ಆರೋಪ!

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: ಐವರು IAS ಅಧಿಕಾರಿಗಳ ವರ್ಗಾವಣೆ | IAS Officer Transfer

BIG NEWS : ಭಾರತದ ರಾಜಕೀಯ ಇತಿಹಾಸದಲ್ಲಿ ‘ನೆಹರೂ ದಾಖಲೆ’ ಮುರಿದ ಮೋದಿ : ನಿರಂತರ 4,399 ದಿನಗಳ ಕಾಲ ‘ಪ್ರಧಾನಿ’ಯಾಗಿ ಸೇವೆ | PM Modi

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 5 ಮಂದಿ `IAS’ ಅಧಿಕಾರಿಗಳ ವರ್ಗಾವಣೆ | IAS Officer Transfer

State News
KARNATAKA

BREAKING : ಬೆಂಗಳೂರಲ್ಲಿ ಕಸದ ಹೆಸರಿನಲ್ಲಿ 36 ಸಾವಿರ ಕೋಟಿ ಲೂಟಿ : ಆರ್.ಅಶೋಕ್ ಗಂಭೀರ ಆರೋಪ!

By ಸುರೇಶ್‌ KARNATAKA 1 Min Read

ಬೆಂಗಳೂರು : ಬೆಂಗಳೂರಿನಲ್ಲಿ ಕಸದ ಹೆಸರಿನಲ್ಲಿ 36,000 ಕೋಟಿ ರೂಪಾಯಿ ಲೂಟಿ ಮಾಡಲಾಗಿದೆ. ಅಲ್ಲದೆ 36,000 ಕೋಟಿ ಹಗರಣದಲ್ಲಿ 10,000…

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: ಐವರು IAS ಅಧಿಕಾರಿಗಳ ವರ್ಗಾವಣೆ | IAS Officer Transfer

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 5 ಮಂದಿ `IAS’ ಅಧಿಕಾರಿಗಳ ವರ್ಗಾವಣೆ | IAS Officer Transfer

ಶಿಕ್ಷಣ ಕ್ಷೇತ್ರ ಇಂದು ಸಂಪೂರ್ಣ ವ್ಯಾಪಾರೀಕರಣಗೊಂಡಿದೆ: ರೈತ ಮುಖಂಡ ಶಿವಾನಂದ ಕುಗ್ವೆ ಆತಂಕ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.