ಬೆಳಗಾವಿ : ಲೋಕಸಭೆ ಚುನಾವಣೆಗೆ ಬಿಜೆಪಿ ಬೆಳಗಾವಿ ಕ್ಷೇತ್ರಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ಗೆ ಟಿಕೆಟ್ ನೀಡಿದ್ದು ಇದೀಗ ಜಗದೀಶ್ ಶೆಟ್ಟರ್ ವಿರುದ್ಧ ಸಚಿವ ಲಕ್ಷ್ಮಿ ಹೆಬ್ಬಾಳಕರ್ ಕಿಡಿ ಕಾರಿದ್ದು ಮೊದಲು ಬೆಳಗಾವಿಯಲ್ಲಿನ ಅವರ ಮನೆ ವಿಳಾಸ ಕೇಳಿ ಎಂದು ತಿಳಿಸಿದರು.
ಮೊಹಮ್ಮದ್ ಶಮಿ ದಾಖಲೆ ಮುರಿದ ‘ರಶೀದ್ ಖಾನ್’: ಅತಿ ಹೆಚ್ಚು ‘ವಿಕೆಟ್’ ಪಡೆದ ಬೌಲರ್ ಹೆಗ್ಗಳಿಕೆ
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ ಶೆಟ್ಟರ್ ಆರು ಬಾರಿ ಹುಬ್ಬಳ್ಳಿಯಲ್ಲಿ ಶಾಸಕರಾಗಿದ್ದಾರೆ. ಈಗ ಬೆಳಗಾವಿಗೆ ಬಂದು, ‘ಇದು ನನ್ನ ಕರ್ಮಭೂಮಿ’ ಎಂದು ಹೇಳುತ್ತಿದ್ದಾರೆ. ಮೊದಲು ಬೆಳಗಾವಿಯಲ್ಲಿನ ಅವರ ಮನೆ ವಿಳಾಸ ಕೇಳಿ.ನರೇಂದ್ರ ಮೋದಿ ಹೆಸರಿನಲ್ಲಿ ಗೆದ್ದುಬಂದ ಇಲ್ಲಿನ ಸಂಸದರು ಕಳೆದ 10 ವರ್ಷಗಳಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ. ಮೂಕ, ಕಿವುಡ ಮತ್ತು ಕುರುಡರಾಗಿರುವ ಇಂಥ ಸಂಸದರು ನಮಗೆ ಬೇಕೇ?’ ಎಂದು ಪ್ರಶ್ನಿಸಿದರು.
BIG NEWS: ‘ಸುಮಲತಾ’ ಮನವೊಲಿಗೆ ಸಕ್ಸಸ್: ಏ.4ರಂದು ‘ಮಂಡ್ಯ ಅಭ್ಯರ್ಥಿ’ಯಾಗಿ ‘HDK ನಾಮಪತ್ರ ಸಲ್ಲಿಕೆ’ ಫಿಕ್ಸ್
ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಬಗ್ಗೆ ಮಾತನಾಡುವ ನರೇಂದ್ರ ಮೋದಿ ಅವರು, ಹಾಲಿ ಸಂಸದರಾಗಿದ್ದರೂ ಸುಮಲತಾ ಮತ್ತು ಮಂಗಲಾ ಅಂಗಡಿ ಅವರಿಗೆ ಏಕೆ ಟಿಕೆಟ್ ಕೊಡಲಿಲ್ಲ?ಬಿಜೆಪಿಯವರು ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವುದನ್ನು ವಿರೋಧಿಸಿದರು. ಈಗ ಚುನಾವಣೆಯಲ್ಲಿ ಕೂಡಲಸಂಗಮದ ಪಂಚಮಸಾಲಿ ಪೀಠದ ಶ್ರೀಗಳನ್ನು ಭೇಟಿಯಾಗುತ್ತಾರೆ. ಆದರೆ, ಮೀಸಲಾತಿಗಾಗಿ ನಿಜವಾಗಿ ಹೋರಾಡಿದವರು ಯಾರು ಎಂಬುದು ಸಮಾಜಕ್ಕೆ ಗೊತ್ತಿದೆ ಎಂದರು.