ಬೆಂಗಳೂರು: ನನಗೆ ಅಂಬರೀಶ್ ಅಣ್ಣನ ಮನೆಗೆ ಭೇಟಿ ನೀಡಿವುದು ಹೊಸದೇನಲ್ಲ. ನಾನು ಈ ಹಿಂದೆ ಭೇಟಿ ನೀಡಿದಂತೆ ಅಂಬರೀಶ್ ಮನೆಗೆ ಭೇಟಿ ನೀಡಿದ್ದೇನೆ. ಅದರಲ್ಲಿ ಹೊಸದೇನಿಲ್ಲ ಅಂತ ಮಂಡ್ಯ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಅಲ್ಲದೇ ಅವರನ್ನು ಮನವೊಲಿಸಿದ್ದು, ಏಪ್ರಿಲ್.4ರಂದು ನಾಮಪತ್ರ ಸಲ್ಲಿಸೋದಾಗಿಯೂ ಕುಮಾರಸ್ವಾಮಿ ಹೇಳಿದ್ದಾರೆ.
ಇಂದು ಮಂಡ್ಯ ಲೋಕಸಭಾ ಸಂಸದೆ ಸುಮಲತಾ ಅಂಬರೀಶ್ ಅವರ ಜೆಪಿ ನಗರದ ನಿವಾಸಕ್ಕೆ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಭೇಟಿ ನೀಡಿದರು.
ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ತಮಗೆ ಬೆಂಬಲಿಸುವಂತೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಸುಮಲತಾ ಅಂಬರೀಶ್ ಅವರೊಂದಿಗೆ ಚರ್ಚಿಸಿದ್ದಾರೆ ಎನ್ನಲಾಗಿತ್ತು.
ಆದ್ರೇ ಸುಮಲತಾ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಹೆಚ್.ಡಿಕೆ ಏಪ್ರಿಲ್.4ರಂದು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದೇನೆ. ಅದಕ್ಕೂ ಮುನ್ನಾ ಏಪ್ರಿಲ್.3ರಂದು ಸುಮಲತಾ ಮಂಡ್ಯದಲ್ಲಿ ಬೆಂಬಲಿಗರು, ಹಿತೈಷಿಗಳು, ಕಾರ್ಯಕರ್ತರ ಜೊತೆಗೆ ಸಭೆ ನಡೆಸಲಿದ್ದಾರೆ ಎಂದರು.
ಮಂಡ್ಯದಲ್ಲಿ ಬೆಂಬಲಿಗರ ಸಭೆಯ ಬಳಿಕ ತಮ್ಮ ನಿರ್ಧಾರವನ್ನು ಸುಮಲತಾ ಪ್ರಕಟಿಸಲಿದ್ದಾರೆ. ನಾನು ಮಂಡ್ಯ ಕ್ಷೇತ್ರದಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿದ್ದೇನೆ ಎಂದರು.
ಇಂದಿನ ನನ್ನ ಭೇಟಿ ಅತ್ಯಂತರ ಸೌಹಾರ್ದಯುತವಾದ ಭೇಟಿಯಾಗಿದೆ. ಅಂಬರೀಶ್ ಅಣ್ಣನ ಮನೆಗೆ ನನಗೆ ಬೇಟಿ ನೀಡುವುದು ನನಗೇನು ಹೊಸದೇನಲ್ಲ. ನಾನು, ಅಂಬರೀಶ್ ಒಟ್ಟಿಗೆ ಉಂಡು ಬೆಳೆದವರು. ಡಿಕೆಶಿ ನನ್ನ ಬಹಣ ದೊಡ್ಡಮಟ್ಟದ ಹಿತೈಷಿಗಳು ಎಂದು ಹೇಳಿದರು.
ಮಹಿಳಾ ಕೋಟಾದಲ್ಲಿ ಸಚಿವೆಯಾಗಿರುವೆ, ಯಾರಿಂದಲೂ ಕಸಿದಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್