Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಲದ `EMI’ ಪಾವತಿ ಮಿಸ್ ಮಾಡಿಕೊಂಡರೆ ನಿಮಗಾಗುವ ನಷ್ಟಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

10/04/2026 1:41 PM

SHOCKING : `ಫಾಸ್ಟ್‌ ಟ್ಯಾಗ್‌’ನಲ್ಲಿ ಹಣವಿಲ್ಲದ್ದಕ್ಕೆ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಟೋಲ್ ಸಿಬ್ಬಂದಿ : ವಿಡಿಯೋ ವೈರಲ್ | WATCH VIDEO

10/04/2026 1:22 PM

ಸರ್ಕಾರಿ ಸೌಲಭ್ಯ ಪಡೆಯಲು ಪೋಡಿ ಕಡ್ಡಾಯ: ರೈತರು ತಿಳಿಯಲೇಬೇಕಾದ ಪ್ರಮುಖ ವಿಚಾರಗಳಿವು.!

10/04/2026 1:04 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಯಾವುದೇ ಹೋಟೆಲ್, ಲಾಡ್ಜ್ ಗಳಲ್ಲಿ ರೂಮ್ ನಂ-13 ಇರುವುದಿಲ್ಲ ಏಕೆ…? : ಇಲ್ಲಿದೆ ಅಚ್ಚರಿಯ ಕಾರಣ…
LIFE STYLE

ಯಾವುದೇ ಹೋಟೆಲ್, ಲಾಡ್ಜ್ ಗಳಲ್ಲಿ ರೂಮ್ ನಂ-13 ಇರುವುದಿಲ್ಲ ಏಕೆ…? : ಇಲ್ಲಿದೆ ಅಚ್ಚರಿಯ ಕಾರಣ…

By KNN IT Team12/01/2024 8:09 PM

ಮನೆಮಂದಿ ಅಥವಾ ಫ್ರೆಂಡ್ಸ್ ಎಲ್ಲರೂ ಹೊರಗಡೆ ಟ್ರಿಪ್ ಹೋದಾಗ ಹೋಟೆಲ್ ಅಥವಾ ಲಾಡ್ಜ್ ಗಳಲ್ಲಿ ಉಳಿಯೋದು ಸಾಮಾನ್ಯ. ಹೀಗೆ ಉಳಿಯುವಾಗ ನೀವು ಅಲ್ಲಿ ಈ ವಿಶೇಷವನ್ನೇನಾದರೂ ಗಮನಿಸಿದ್ದೀರಾ. ಏನಂದ್ರೆ ಯಾವುದೇ ಹೋಟೆಲ್ ನಲ್ಲಿ ಕೊಠಡಿ ಸಂಖ್ಯೆ 13 ಇರುವುದಿಲ್ಲ. 12 ರೂಮ್ ನಂಬರ್ ಬಳಿಕ 14 ನಂಬರ್ ಮುಂದುವರಿಯುತ್ತದೆ. ಬರೀ ರೂಮ್ ಮಾತ್ರವಲ್ಲ ಯಾವುದಾದರೂ ಒಂದು ಬಿಲ್ಡಿಂಗ್ ಕೂಡ 12 ಮಹಡಿಗಳಿಗಿಂತ ಹೆಚ್ಚು ಎತ್ತರವಾಗಿದ್ದರೆ ಅಂದರೆ 15, 20 ಅಂತಸ್ತುಗಳಷ್ಟು ಎತ್ತರ ಇದ್ದರೆ ಅದರಲ್ಲಿ 13ನೇ ಮಹಡಿ ಇರೋದೆ ಇಲ್ಲ. ನೇರವಾಗಿ 14ನೇ ಮಹಡಿ ಇರುತ್ತೆ ಇದು ನಿಮಗೆ ವಿಚಿತ್ರವಾಗಿ ತೋರಬಹುದು, ಆದರೆ ಅದು ನಿಜ. ಇದು ವಿಚಿತ್ರ ಎನಿಸಿದರೂ ಸಹ ಅದರ ಹಿಂದಿನ ಕಾರಣ ತಿಳಿದರೆ ನಿಜಕ್ಕೂ ನಮ್ಮನ್ನು ಅಚ್ಚರಿಗೆ ದೂಡುತ್ತದೆ.

13ನೇ ನಂಬರ್ ಬಳಸದೇ ಇರುವುದಕ್ಕೆ ಟ್ರೈಸ್ಕೈಡೆಕಾಫೋಬಿಯಾ ಎಂದು ಕರೆಯುತ್ತಾರೆ. ಇದರರ್ಥ 13ನೇ ನಂಬರ್ ಮೇಲಿನ ಭಯ ಎಂಬುದಾಗಿದೆ. ಅಂದರೆ, 13ನೇ ನಂಬರ್ ದುರಾದೃಷ್ಟ ಅಥವಾ ಸಾವಿನ ಸಂಖ್ಯೆ ಎಂಬ ನಂಬಿಕೆ ಜನರಲ್ಲಿದೆ. ಯಾವುದೇ ಹೋಟೆಲ್ ಅಥವಾ ವಸತಿ ಕಟ್ಟಡದಲ್ಲಿ 13 ಸಂಖ್ಯೆಗಳು ತುಂಬಾ ಕಡಿಮೆ ಇರುವುದು ಏಕೆ ಅನ್ನೋದರ ಹಿಂದೆ ಯಾವುದೇ ಧಾರ್ಮಿಕ ನಂಬಿಕೆಯಿಲ್ಲ, ಅಥವಾ ಯಾವುದೇ ಸಾಂಪ್ರದಾಯಿಕತೆ ಇಲ್ಲ, ಆದರೆ ನ್ಯೂಮೆರಲಜಿ ಪ್ರಕಾರ ಸಂಖ್ಯೆ 13 ಶುಭವೆಂದು ಪರಿಗಣಿಸಲಾಗುವುದಿಲ್ಲ. ಕಾರಣ ಏನೆಂದರೆ, 13ನೇ ನಂಬರ್ ಸಾವಿನ ನಂಬರ್ ಅಂತೆ. ಕಿಶ್ಚಿಯನ್ನರ ದೇವರು ಜೀಸಸ್ ಶುಕ್ರವಾರ 13ನೇ ತಾರೀಖಿನಂದು ಮೃತಪಟ್ಟರು. ಹೀಗಾಗಿ ಈ ಸಂಖ್ಯೆಯನ್ನು ದುರಾದೃಷ್ಟ ಮತ್ತು ಅಪಶಕುನ ಎಂದು ಕರೆಯಲಾಗುತ್ತದೆ. ಹೀಗಾಗಿ ಕಟ್ಟಡದ 13ನೇ ಮಹಡಿಯನ್ನು ಅನೇಕ ಹೋಟೆಲ್ಗಳಲ್ಲಿ ಸ್ಕಿಪ್ ಮಾಡುವ ಮೂಲಕ ಭಯವನ್ನು ಹೋಗಲಾಡಿಸುವ ಪ್ರಯತ್ನ ಮಾಡಲಾಗುತ್ತದೆ. ಇಷ್ಟೇ ಅಲ್ಲದೆ ನ್ಯೂಮೆರಲಜಿ ಪ್ರಕಾರ, ಸಂಖ್ಯೆ 12 ಅನ್ನು ಪರಿಪೂರ್ಣತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ ಮತ್ತು ಅದಕ್ಕೆ ಮತ್ತೊಂದು ಸಂಖ್ಯೆಯನ್ನು ಸೇರಿಸುವುದನ್ನು ದುರಾದೃಷ್ಟದ (Bad Luck) ಸಂಕೇತವೆಂದು ಪರಿಗಣಿಸಬಹುದು. ಹಾಗಾಗಿ ಸಂಖ್ಯೆ 13 ಅನ್ನು ನ್ಯೂಮೆರಲಜಿಯಲ್ಲಿ ಅಶುಭವೆಂದು ಪರಿಗಣಿಸಲಾಗುತ್ತದೆ. ಈ ಕಾರಣದಿಂದಾಗಿ, ಅನೇಕ ಜನರು ಈ ಸಂಖ್ಯೆಯನ್ನು ಕೆಟ್ಟ ಶಕುನದ ಸಂಕೇತವೆಂದು ಪರಿಗಣಿಸುತ್ತಾರೆ. ಹಾಗಾಗಿಯೇ ಹೆಚ್ಚಿನವರು ಈ ಸಂಖ್ಯೆಯ ಬಗ್ಗೆ ಭಯ ಪಡುತ್ತಾರೆ. ಜೊತೆಗೆ ಇನ್ನೂ 1800ರ ದಶಕದ ಉತ್ತರಾರ್ಧದಲ್ಲಿ, ಓಜಾ ಬೋರ್ಡ್‌ಗಳು ಹುಟ್ಟಿಕೊಂಡವು. ಸತ್ತವರೊಂದಿಗೆ ಸಂಪರ್ಕ ಸಾಧಿಸಲು ಮಾರ್ಗವನ್ನು ಹುಡುಕುತ್ತಿರುವವರಿಗೆ 13ನೇ ಸಂಖ್ಯೆಯು ಒಂದು ಪೋರ್ಟಲ್ ಆಗಿತ್ತು ಎಂದು ನಂಬಲಾಗಿದೆ. ವಾಸ್ತವವಾಗಿ, ಇದು ಒಬ್ಬರ ಆರೋಗ್ಯದ ಮೇಲೆಯೂ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹಲವಾರು ಅಧ್ಯಯನಗಳು ಕಂಡುಕೊಂಡಿವೆ. 13ನೇ ಸಂಖ್ಯೆಯಿಂದ ಭಯಭೀತರಾಗಿರುವ ಜನರು ಹೆಚ್ಚಿನ ಮಟ್ಟದ ಉದ್ವೇಗ ಮತ್ತು ಆತಂಕವನ್ನು ಹೊಂದಿರುತ್ತಾರೆ ಎಂದು ಸಾಬೀತಾಗಿದೆ. ಇನ್ನು 13 ಸಂಖ್ಯೆಯನ್ನು ಮೊದಲು ಚೀನಾದಲ್ಲಿ ಅಶುಭ ಎಂದು ಪರಿಗಣಿಸಲಾಯಿತು ಮತ್ತು ನಂತರ ಕ್ರಮೇಣ 13 ಸಂಖ್ಯೆಯನ್ನು ವಿಶ್ವದಾದ್ಯಂತ ಕೆಟ್ಟ ಶಕುನವೆಂದು ಪರಿಗಣಿಸಲಾಯಿತು ಎಂದು ಹೇಳಲಾಗುತ್ತದೆ. ಆದರೆ ಅದರ ಹಿಂದಿನ ಕಥೆಯ ಬಗ್ಗೆ ಹೆಚ್ಚಿನವರಿಗೆ ಇನ್ನೂ ತಿಳಿದಿಲ್ಲ. ವಿಶ್ವದ ಅನೇಕ ದೇಶಗಳಲ್ಲಿ, 13 ಸಂಖ್ಯೆಯನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಅನೇಕ ದೇಶಗಳಲ್ಲಿ ಅನೇಕ ಜನರು ಸಂಖ್ಯೆ 13 ಅನ್ನು ದೆವ್ವಗಳು ಮತ್ತು ಫ್ಯಾಂಟಮ್‌ಗಳಿಗೆ ಸಂಬಂಧ ಹೊಂದಿದೆ ಎನ್ನುತ್ತಾರೆ. ಅನೇಕ ಜನರು ಸಂಖ್ಯೆ 13 ರ ಫೋಬಿಯಾದಿಂದ ಬಳಲುತ್ತಿದ್ದಾರೆ, ಅವರು ಸಂಖ್ಯೆ 13 ಅನ್ನು ನೋಡಲು ಹೆದರುತ್ತಾರೆ. ಫ್ರಾನ್ಸ್ ನಲ್ಲಿ, ಮೇಜಿನ ಜೊತೆ 13 ಕುರ್ಚಿಗಳನ್ನು ಹೊಂದಿರುವುದು ಸಹ ದುರದೃಷ್ಟಕರವೆಂದು ಪರಿಗಣಿಸಲಾಗುತ್ತದೆಯಾಗಿದೆ.

Share. Facebook Twitter LinkedIn WhatsApp Email

Related Posts

‘MMIWG2SLGBTQQIA+’ ಎಂದರೆ ಏನು? ಕೆನಡಾ ಸಂಸದೆಯ ಹೇಳಿಕೆಗೆ ಎಲೋನ್ ಮಸ್ಕ್ ವ್ಯಂಗ್ಯ.!

10/04/2026 11:18 AM2 Mins Read

ಆರೋಗ್ಯದ ‘ಅಮೃತ’ ರಾಗಿ ಅಂಬಲಿ: ದಿನವೂ ಕುಡಿದರೆ ಈ ಕಾಯಿಲೆಗಳು ನಿಮ್ಮ ಹತ್ತಿರವೂ ಸುಳಿಯಲ್ಲ!

10/04/2026 9:56 AM1 Min Read

ಗೀಸರ್, ಹೀಟರ್ ಬಳಸಿದರೂ ಬರಲ್ಲ ಭಾರಿ ಕರೆಂಟ್ ಬಿಲ್ : ವಿದ್ಯುತ್ ಉಳಿಸಲು ಜಸ್ಟ್ ಹೀಗೆ ಮಾಡಿ.!

10/04/2026 6:30 AM1 Min Read
Recent News

ಸಾಲದ `EMI’ ಪಾವತಿ ಮಿಸ್ ಮಾಡಿಕೊಂಡರೆ ನಿಮಗಾಗುವ ನಷ್ಟಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

10/04/2026 1:41 PM

SHOCKING : `ಫಾಸ್ಟ್‌ ಟ್ಯಾಗ್‌’ನಲ್ಲಿ ಹಣವಿಲ್ಲದ್ದಕ್ಕೆ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಟೋಲ್ ಸಿಬ್ಬಂದಿ : ವಿಡಿಯೋ ವೈರಲ್ | WATCH VIDEO

10/04/2026 1:22 PM

ಸರ್ಕಾರಿ ಸೌಲಭ್ಯ ಪಡೆಯಲು ಪೋಡಿ ಕಡ್ಡಾಯ: ರೈತರು ತಿಳಿಯಲೇಬೇಕಾದ ಪ್ರಮುಖ ವಿಚಾರಗಳಿವು.!

10/04/2026 1:04 PM

BREAKING : ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಭಾರಿ ಎಡವಟ್ಟು : 600ಕ್ಕೆ 683 ಅಂಕ ನೀಡಿದ ಇಲಾಖೆ!

10/04/2026 12:58 PM
State News
KARNATAKA

ಸಾಲದ `EMI’ ಪಾವತಿ ಮಿಸ್ ಮಾಡಿಕೊಂಡರೆ ನಿಮಗಾಗುವ ನಷ್ಟಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

By kannadanewsnow5710/04/2026 1:41 PM KARNATAKA 2 Mins Read

ಬೆಂಗಳೂರು: ಇಂದಿನ ದಿನಗಳಲ್ಲಿ ವೈಯಕ್ತಿಕ ಸಾಲ ಅಥವಾ ಗೃಹ ಸಾಲ ಪಡೆಯುವುದು ಸಾಮಾನ್ಯವಾಗಿದೆ. ಆದರೆ ನಿಗದಿತ ದಿನಾಂಕದಂದು ಇಎಂಐ ಪಾವತಿಸಲು…

SHOCKING : `ಫಾಸ್ಟ್‌ ಟ್ಯಾಗ್‌’ನಲ್ಲಿ ಹಣವಿಲ್ಲದ್ದಕ್ಕೆ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಟೋಲ್ ಸಿಬ್ಬಂದಿ : ವಿಡಿಯೋ ವೈರಲ್ | WATCH VIDEO

10/04/2026 1:22 PM

ಸರ್ಕಾರಿ ಸೌಲಭ್ಯ ಪಡೆಯಲು ಪೋಡಿ ಕಡ್ಡಾಯ: ರೈತರು ತಿಳಿಯಲೇಬೇಕಾದ ಪ್ರಮುಖ ವಿಚಾರಗಳಿವು.!

10/04/2026 1:04 PM

BREAKING : ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಭಾರಿ ಎಡವಟ್ಟು : 600ಕ್ಕೆ 683 ಅಂಕ ನೀಡಿದ ಇಲಾಖೆ!

10/04/2026 12:58 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.