ಬೆಂಗಳೂರು: ಬಿಗ್ ಬಾಸ್ ಸ್ಪರ್ಧಿ ಪ್ರತಾಪ್ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ನಡುವೆ ಪ್ರತಾಪ್ ಅವರಿಗೆ ಫುಡ್ ಫಾಯ್ಸನ್ ಆಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎನ್ನಲಾಗಿದೆ. ಕಳೆದ ಎರಡು ದಿನದ ಹಿಂದೆ ಈ ಘಟನೆ ನಡೆದಿದ್ದು, ಇಂದು ಅವರು ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎನ್ನಲಾಗಿದೆ.
ಆದರೆ ಕೆಲವು ಮಂದಿ ಸಾಮಾಜಿಕ ಬಳಕೆದಾರರು ಪ್ರತಾಪ್ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಅಂತ ಸುಳ್ಳು ಸುದ್ದಿ ಹರಡಿಸುತ್ತಿದ್ದು, ಇದು ಸತ್ಯಕ್ಕೆ ವಿರುದ್ದವಾಗಿದೆ ಅಂತ ಬಿಗ್ ಬಾಸ್ ನಡೆಸಿಕೊಡುವವರು ತಿಳಿಸಿದ್ದಾರೆ. ಕೆಲವು ಮಂದಿ ಪ್ರತಾಪ್ ಅವರು ವಿಟಮಿನ್ ಮಾತ್ರೆಗಳನ್ನು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಬಿಗ್ ಬಾಸ್ ಮನೆಯಲ್ಲಿ ನಮ್ಮ ಮಗನಿಗೆ ಫುಡ್ ಪಾಯ್ಸನ್ ಆಗಿದೆ ಅಂತ ತಿಳಿಸಿದ್ದಾರೆ ಅಂತ ಪ್ರತಾಪ್ ತಂದೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಸದ್ಯ ಅವರು ಜ್ವರದಿಂದ ಕೂಡ ಬಳಲುತ್ತಿದ್ದಾರೆ ಅಂತ ಹೇಳಿದ್ದಾರೆ. ಪ್ರತಾಪ್ ಬಗ್ಗೆ ಕೇಳಿ ಬರುತ್ತಿರುವ ಹೆಚ್ಚಿನ ಮಾಹಿತಿಯನ್ನು ಸಂಬಂಧಪಟ್ಟ ಮಾಧ್ಯಮದಿಂದ ಬಂದ ಬಳಿಕ ಅದನ್ನು ಕೂಡ ಸುದ್ದಿಯನ್ನು ಪ್ರಕಟ ಮಾಡಲಾಗುವುದು.