ಮಂಗಳೂರು: ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಾಯಿ ಮರಿ ಎಂಬುದಾಗಿ ಹೇಳಿಲ್ಲ. ಕೇಂದ್ರದಿಂದ ಅನುದಾನ ತರಬೇಕು ಅಂದರೇ ನಾಯಿ ತರ ಧೈರ್ಯ ಇರಬೇಕು. ಆದ್ರೇ ಆ ಧೈರ್ಯವಿಲ್ಲದೇ ಮೋದಿ ಮುಂದೆ ನಾಯಿ ಮರಿ ತರ ಇರುತ್ತಾರೆ ಬೊಮ್ಮಾಯಿ ಎಂದು ಹೇಳಿದ್ದೇನೆ ಅಷ್ಟೇ. ಅದನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ. ನನ್ನನ್ನು ಟಗರು, ಹುಲಿಯಾ ಅಂತಾರೆ. ಯಡಿಯೂರಪ್ಪನನ್ನು ರಾಜಾಹುಲಿ ಎನ್ನುತ್ತಾರೆ. ಹಾಗೆ ಅನ್ನೋದು ಅಸಂವಿಧಾನಿಕ ಪದವಾಗುತ್ತದೆಯೇ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಯೂಟರ್ನ್ ಹೊಡೆದಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾನು ಕೇಂದ್ರದಿಂದ ಅನುದಾನ ತರಲು ಧೈರ್ಯಬೇಕು ಎಂದು ಹೇಳುವಾಗ ಸಿಎಂ ಬೊಮ್ಮಾಯಿ, ಮೋದಿ ಮುಂದೆ ನಾಯಿ ಮರಿ ಇದ್ದಂತ ಇರುತ್ತಾರೆ ಎಂದು ಪ್ರಾಸಂಗಿಕವಾಗಿ ಹೇಳಿದ್ದೇನೆ ಹೊರತು, ಬೊಮ್ಮಾಯಿ ಅವರನ್ನು ನಾಯಿ ಮರಿ ಎಂಬುದಾಗಿ ಹೇಳಿಲ್ಲ ಎಂದರು.
ನನ್ನನ್ನು ಟಗರು, ಹುಲಿಯಾ ಅಂತಾರೆ. ಬಿಎಸ್ ವೈಗೆ ರಾಜಾಹುಲಿ ಅಂದು ಹೇಳುತ್ತಾರೆ. ಅದು ಹೇಗೆ ಅಸಂವಿಧಾನಿಕ ಪದ ಆಗುತ್ತದೆ? ಎಂದ ಸಿದ್ಧರಾಮಯ್ಯ ಅವರು, ನಾಯಿ ನಂಬಿಕಸ್ಥ ಪ್ರಾಣಿ ಎಂದರು.
ನಾಯಿ ರೀತಿಯ ಧೈರ್ಯದಿಂದ ಅನುದಾನವನ್ನು ಕೇಂದ್ರದಿಂದ ತರಬೇಕು. ಕೇಂದ್ರದಿಂದ ನಮ್ಮ ಪಾಲು ತೆಗೆದುಕೊಳ್ಳಬೇಕು ಅಂತ ಹೇಳಿದ್ದೇನೆ. ನಾಯಿಯಂತೆ ಧೈರ್ಯವಾಗಿ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾಗಿರುವಂತ ಪಾಲು ಪಡೆಯಬೇಕು ಎಂದಿದ್ದೇನೆ ಅಷ್ಟೇ. ಅದರ ಹೊರತಾಗಿ ಸಿಎಂ ಬೊಮ್ಮಾಯಿ ಬಗ್ಗೆ ಕೀಳಾಗಿ, ನಾಯಿ ಮರಿಗೆ ಹೋಲಿಕೆ ಮಾಡಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದರು.
ರಾಜ್ಯ ಬಿಜೆಪಿಗರಿಗೆ ದ್ವೇಷವೇ ಮಾಡೆಲ್: #BJPHatePolitics ‘ಟ್ವಿಟ್ಟರ್ ಟ್ಯಾಗ್’ನಲ್ಲಿ ಕಾಂಗ್ರೆಸ್ ಕುಟುಕು
BIGG NEWS: ದಶಪಥ ಹೆದ್ದಾರಿಯಲ್ಲಿ ಪ್ರಯಾಣಿಕರಿಗೆ ತಾತ್ಕಾಲಿಕ ನಿಲುಗಡೆಯಾಗಬೇಕು : ಮಾಜಿ ಸಚಿವ ಸಿ.ಪಿ. ಯೋಗೇಶ್ವರ್
ಹಾವೇರಿ ಸಾಹಿತ್ಯ ಸಮ್ಮೇಳನ: ಜೋಶಿಯಿಂದ ಲೇಖಕಿಯರಿಗೆ ಅವಮಾನ – ಡಾ. ಎಚ್.ಎಲ್. ಪುಷ್ಪಾ ಕಿಡಿ