ನವದೆಹಲಿ : ದೇಶದ ಸೇವಾ ವಲಯ ಡಿಸೆಂಬರ್’ನಲ್ಲಿ ಉತ್ತಮ ಬೆಳವಣಿಗೆ ಕಂಡಿದ್ದು, ಡಿಸೆಂಬರ್ನಲ್ಲಿ ಸೇವಾ ವಲಯದ PMI ಆರು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಸಮೀಕ್ಷೆಯೊಂದರಲ್ಲಿ ಈ ಮಾಹಿತಿ ಹೊರಬಿದ್ದಿದೆ. ಇದಲ್ಲದೇ, ಖಾಸಗಿ ವಲಯದ ಉತ್ಪಾದನೆಯ ಬೆಳವಣಿಗೆಯು ಸುಮಾರು 11 ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ ಎಂದು ಈ ಸಮೀಕ್ಷೆಯಲ್ಲಿ ವರದಿಯಾಗಿದೆ. S&P ಗ್ಲೋಬಲ್ ಇಂಡಿಯಾ ಸರ್ವಿಸ್ ಪರ್ಚೇಸಿಂಗ್ ಮ್ಯಾನೇಜರ್ಗಳ ಸೂಚ್ಯಂಕದ ಪ್ರಕಾರ, ಈ ಅಂಕಿ-ಅಂಶವು ಬಂದಿದೆ. ಇನ್ನು ಅದರ ಡೇಟಾವು ದೇಶದ ಸೇವಾ ಕ್ಷೇತ್ರದ ಬೆಳವಣಿಗೆಯ ವೇಗವನ್ನ ಸ್ಪಷ್ಟವಾಗಿ ತೋರಿಸುತ್ತದೆ.
S&P ಗ್ಲೋಬಲ್ ಇಂಡಿಯಾ ಸರ್ವಿಸ್ ಖರೀದಿ ವ್ಯವಸ್ಥಾಪಕರ ಸೂಚ್ಯಂಕ.!
ಭಾರತದ ಸೇವಾ ವಲಯದ ಬೆಳವಣಿಗೆಯ ವೇಗವು ಡಿಸೆಂಬರ್’ನಲ್ಲಿ ವೇಗಗೊಂಡಿದೆ ಮತ್ತು ಸೇವಾ ವಲಯದ PMI ನಲ್ಲಿ ಹೆಚ್ಚಳವನ್ನ ದಾಖಲಿಸಲಾಗಿದೆ. ಎಸ್ & ಪಿ ಗ್ಲೋಬಲ್ ಇಂಡಿಯಾ ಸರ್ವೀಸ್ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ (PMI) ನವೆಂಬರ್ನಲ್ಲಿ 56.4 ರಿಂದ ಡಿಸೆಂಬರ್ನಲ್ಲಿ 58.5ಕ್ಕೆ ಏರಿದೆ. ಈ ಮೂಲಕ ಸತತ 17ನೇ ತಿಂಗಳಿನಿಂದ 50ರ ಗಡಿ ದಾಟಿದ್ದು, ದೇಶದಲ್ಲಿ ಸೇವಾ ವಲಯದಲ್ಲಿ ಉತ್ತಮ ಬೆಳವಣಿಗೆ ಕಾಣುತ್ತಿದೆ.
ಡಿಸೆಂಬರ್ನಲ್ಲಿ ಸಂಯೋಜಿತ ಸೂಚ್ಯಂಕದಲ್ಲಿ ಉತ್ತಮ ಬೆಳವಣಿಗೆ.!
ಸಂಯೋಜಿತ ಸೂಚ್ಯಂಕವು ಡಿಸೆಂಬರ್’ನಲ್ಲಿ ಬಲವಾದ ಏರಿಕೆಯನ್ನು ಕಂಡಿದೆ ಮತ್ತು 59.4ಕ್ಕೆ ಬಂದಿದೆ. ಇನ್ನೀದು ಜನವರಿ 2014 ರಿಂದ ಅತ್ಯಧಿಕ ಮಟ್ಟವಾಗಿದೆ. ಯಾಕಂದ್ರೆ, ಸೇವಾ ವಲಯದ ಬೆಳವಣಿಗೆ ಮತ್ತು ಉತ್ಪಾದನೆಯಲ್ಲಿ ಉತ್ತಮ ಪಿಕ್ ಅಪ್ ಆಗಿದೆ. ಇದು ಕಳೆದ ತಿಂಗಳು ಅಂದ್ರೆ ನವೆಂಬರ್ 2022ರಲ್ಲಿ 56.7 ರಷ್ಟಿತ್ತು.
50 ಕ್ಕಿಂತ ಹೆಚ್ಚಿನ PMI ವಿಸ್ತರಣೆ.!
ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ (PMI) ಭಾಷೆಯಲ್ಲಿ, 50ಕ್ಕಿಂತ ಹೆಚ್ಚಿನ ಸ್ಕೋರ್ ಚಟುವಟಿಕೆಗಳು ವಿಸ್ತರಿಸುತ್ತಿವೆ ಎಂದರ್ಥ. ಆದ್ರೆ, 50 ಕ್ಕಿಂತ ಕಡಿಮೆ ಸ್ಕೋರ್ ಸಂಕೋಚನವನ್ನ ಸೂಚಿಸುತ್ತದೆ.
ಸಿದ್ದರಾಮಯ್ಯ ರಾಜ್ಯದ ಜನತೆಯ ಕ್ಷಮೆ ಕೇಳಬೇಕು- ಸಚಿವ ಮುರುಗೇಶ್ ನಿರಾಣಿ ಒತ್ತಾಯ
ರಾಜ್ಯದಲ್ಲೇ ಪ್ರಥಮ: ‘ಪೊಲೀಸ’ರಿಂದಲೇ ನಾಟಕ ಪ್ರದರ್ಶನ, ನಟ ‘ಕಿಚ್ಚ ಸುದೀಪ್’ ಮೆಚ್ಚುಗೆ